ಇನ್ನೂ ಬಾರದ ಕೊಟ್ಟೂರು ರೈಲು – ರಹಮತ್ ತರೀಕೆರೆ

ಕೊಟ್ಟೂರು   ಹರಿಹರ ರೈಲು ಆರಂಭವಾದ ಹಿನ್ನೆಲೆಯಲ್ಲಿ… 24 ವರ್ಷಗಳ ಬಳಿಕ ಇವತ್ತು ಹೊಸಪೇಟೆಯಿಂದ ಕೊಟ್ಟೂರ ಮೂಲಕ ಹರಿಹರಕ್ಕೆ ರೈಲು ಹೊರಡುತ್ತಿದೆ. 15 ವರ್ಷಗಳ ಹಿಂದೆ ಬರೆದ ಲೇಖನವಿದು. ಸಾಧ್ಯವಾದರೆ ಉದ್ಘಾಟನ ಬಂಡಿಯಲ್ಲಿ ಸವಾರಿ ಮಾಡಬೇಕೆಂಬ ಇರಾದೆಯೂ ಇದೆ. ಇನ್ನೂ ಬಾರದ ಕೊಟ್ಟೂರು ರೈಲು ನಾನು ಶಿವಮೊಗ್ಗೆ ಬಿಟ್ಟು ಹೊಸಪೇಟೆಗೆ ಬಂದಾಗ (1992) ರೈಲ್ವೆಹಳಿಯ ಸಮೀಪವೇ ಮನೆ ಹಿಡಿದಿದ್ದೆ. ಆಗ ಹಳಿಗಳ ಮೇಲೆ ಹೊಸಪೇಟೆಯಿಂದ ಕೊಟ್ಟೂರಿಗೆ ಪುಟ್ಟದೊಂದು ರೈಲು ಹೋಗುತ್ತಿತ್ತು. ಅದರಲ್ಲಿ ಮರಿಯಮ್ಮನಹಳ್ಳಿ ಕೊಟ್ಟೂರುಗಳಿಗೆ ಜನ, ಗಂಟುಮೂಟೆ ಇಟ್ಟುಕೊಂಡು, ಸರಳಿಲ್ಲದ ಕಿಟಕಿಯಲ್ಲಿ ತಲೆಹಾಕಿಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ಕಿಟಕಿಯ ಸರಳುಗಳಿಗೆ ಹೊರಗಿನಿಂದ ಉದ್ದನೆಯ ಕಟ್ಟಿಗೆಯ ಹೊರೆಗಳನ್ನು ನೇತುಹಾಕಿರುತ್ತಿದ್ದು ಉಂಟು. ಅದನ್ನು ನಾವು ಕಟ್ಟಿಗೆ ರೈಲು ಎಂದು ಕರೆಯುತ್ತಿದ್ದೆವು. ಈ ರೈಲಿನಿಂದ ಒಂದು ಸಣ್ಣ ಕಿರಿಕಿರಿಯಿತ್ತು. ಅದು ದೀರ್ಘವಾಗಿ ಅನಗತ್ಯವಾಗಿ ಸಿಳ್ಳುಹಾಕುತ್ತಿತ್ತು. ಎಷ್ಟೊ ದಿನಗಳ ನಂತರ ಅದರ ಕಿರುಚಿನಲ್ಲಿರುವುದು ಗರ್ಜನೆಯಲ್ಲ. ‘ನಾನು ಹೋಗಬೇಕು,…

Read More