ನಾರಾಯಣಗುರು ಚಳವಳಿ

ದಿನೇಶ್ ಅಮಿನ್ ಮಟ್ಟು ಶತಮಾನದುದ್ದಕ್ಕೂ, ದೇಶದ ವಿವಿಧೆಡೆಗಳಲ್ಲಿ ಎರಡು ಪ್ರತ್ಯೇಕ ವಿಚಾರಧಾರೆಗಳ ಸುಧಾರಣಾವಾಧಿ ಚಳವಳಿಗಳು ನಡೆದವು. ಮೊದಲನೆಯದ್ದು ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಕೇಶವ ಸೇನ್, ರಾನಡೆ, ದೇವಿಂದ್ರನಾಥ ಠಾಕೂರ್, ಅನಿಬೆಸೆಂಟ್ ಮೊದಲಾದ ಇಂಗ್ಲೀಷ್ ಕಲಿತ ಮೇಲ್ಜಾತಿಯಿಂದಲೇ ಬಂದವರ ನೇತೃತ್ವದ ಚಳವಳಿಗಳು. ಇವು ಮಹಿಳೆಯರು ಮತ್ತು ಶೋಷಿತರಿಗಾಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತಿದವು.  ಸತಿಪದ್ದತಿ, ವಿಧವಾ ವಿವಾಹ, ವರದಕ್ಷಿಣಿ, ಮೊದಲಾದ ಬಹುಮಟ್ಟಿಗೆ ಮೇಲ್ಜಾತಿ ಸಮಾಜದಲ್ಲಿನ ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ಅನಿಷ್ಟಗಳ ನಿವಾರಣೆ, ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತು. ಆರ್ಯ ಸಮಾಜ ಪ್ರಾರಂಭಿಸಿದ್ದ ‘ಶುದ್ಧಿ ಚಳವಳಿ’ ಯನ್ನು ಗಮಿಸಿದರೆ, ಕೆಳವರ್ಗದ ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವದನ್ನು ತಪ್ಪಿಸುವುದು ಕೂಡ ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತೋ ಏನೋ ಎಂಬ ಅನುಮಾನ ಕೂಡಾ ಮೂಡುತ್ತದೆ. ಈ ಚಳವಳಿಗಳು ಕೈಗೆತ್ತಿಕೊಂಡ ಬಹಳಷ್ಟು ಸಮಸ್ಯೆಗಳು ತಳಸಮುದಾಯದ ಜ್ವಲಂತ ಸಮಸ್ಯೆಯಾಗಿರಲಿಲ್ಲ. ಅದೇ…

Read More