ಮಾದ್ಯಮಗಳ ಮೇಲೆ ವಿಶ್ವಾಸ ಕಡಿಮೆಯಾಗುತ್ತಿರುವುದು ವಿಷಾದನೀಯ- ದಿನೇಶ ಅಮೀನ ಮಟ್ಟು

ಹತ್ತಾರು  ಸೈದ್ದಾಂತಿಕ ಭಿನ್ನಾಭಿಪ್ರಾಯಗಳೂ ಇದ್ದಾಗಲೂ ಸಹ ಎಲ್ಲ ಪತ್ರಕರ್ತರು ಒಗ್ಗಟ್ಟಾಗಿರಬೇಕು. ಭಿನ್ನಾಭಿಪ್ರಾಯಗಳನ್ನು ಮೀರಿ ಮಾನವೀಯ ಸಂಬಂದಗಳನ್ನುಬೆಳೆಸಿಕೊಳ್ಳಬೇಕು. ಹಿಂದೆ ಜನ ಚಳುವಳಿಗಳ ಜೊತೆ ಮಾದ್ಯಮಗಳೂ ಬೆಳೆದವು. ಮಾದ್ಯಮಗಳಿಂದ ಚಳುವಳಿಗೆ ಶಕ್ತಿ ಸಿಕ್ಕಿತ್ತು. ಆದರೆ ಈಗ  ಆ ಪರಿಸ್ಥಿತಿ ಇಲ್ಲ. ಮಾಧ್ಯಮಗಳು ಚಳುವಳಿಗಳನ್ನು ಸೃಷ್ಟಿ ಮಾಡುತ್ತಿವೆ ಮತ್ತು ಹಾಳು ಮಾಡುತ್ತಿವೆ. ಪತ್ರಕರ್ತರಿಗೆ ಶೀಲ ಎನ್ನುವುದು ಬಹುಮುಖ್ಯವಾಗಿರುವಂತಹದ್ದು. ಪತ್ರಕರ್ತ ಸಿನಿಕನಾಗದೇ ಸಮಾಜಸೇವಕನಾಗೇಕು. ಪತ್ರಕರ್ತನಿಗೆ ನಡತೆ ಹಾಗೂ ವಿಶ್ವಾಸ ಬಹಳ ಮುಖ್ಯ. ಎಂದು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ ದಿನೇಶ ಅಮೀನಮಟ್ಟು ಹೇಳಿದರು. ಅವರು ಕೊಪ್ಪಳದಲ್ಲಿಂದ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದೆ ಪತ್ರಕರ್ತರಿಗೆ ಬೆದರಿಸಲಾಗುತ್ತಿತ್ತು. ಎದೆಯ ಮೇಲೆ ಆಯುಧ ವಿಟ್ಟು ಹೆದರಿಸಿದಾಗ ಪತ್ರಕರ್ತ ಸಿಡಿದೆಳುತ್ತಿದ್ದ ಆದರೆ ಇಂದು ಆತನ ಹೆಗಲ ಮೇಲೆ ಕೈ ಹಾಕಿ ಆತನ ಜೇಬಿಗೆ ದುಡ್ಡಿಟ್ಟು ಓಲೈಕೆ ಮಾಡಲಾಗುತ್ತಿದೆ ಇದು ಅಪಾಯಕಾರಿ.…

Read More