ಹೋಗಿ ಬನ್ನಿ ಜಾರ್ಜ್ : ನೀವು “ಅವರು ಹೆಣೆದ ಬಲೆಗೆ ಬೀಳಬಾರದಿತ್ತು”

ಜನಹೋರಾಟದ ಅಗ್ನಿಕುಂಡದಿಂದ ಮೇಲೆದ್ದು ಬಂದ ಸೋಷಲಿಸ್ಟ್ ನಾಯಕ ಜಾರ್ಜ್ ಫರ್ನಾಂಡೀಸ್ ನಮ್ಮನ್ನ ಅಗಲಿದ್ದಾರೆ,ನಮ್ಮ ಆ ಯೌವನದ ದಿನಗಳಲ್ಲಿ ಜಾರ್ಜ್ ನಮಗೆಲ್ಲ ಹೀರೋ, ಅವರನ್ನು ನಾನು ಮೊದಲ ಬಾರಿ ನೋಡಿದ್ದು ಹುಬ್ಬಳ್ಳಿಯಲ್ಲಿ ರೇಲ್ವೆ ಕಾರ್ಮಿಕರ ಸಂಘಟನೆ ಗೆ ಆಗಾಗ ಹುಬ್ಬಳ್ಳಿಗೆ ಬರುತ್ತಿದ್ದ ಜಾರ್ಜ್ ಸೀದಾ ಸಾದಾ ಮನುಷ್ಯ, ನರಗುಂದ ರೈತ ಹೋರಾಟದ ಸಂದರ್ಭದಲ್ಲಿ, ಹುಬ್ಬಳ್ಳಿ ಗೆ ಬಂದಿದ್ದ ಜಾರ್ಜ ಬೆಂಗಳೂರಿಗೆ ಹೊರಟ ರೈತ ಜಾಥಾದಲ್ಲಿ ಹುಬ್ಬಳ್ಳಿಯಲ್ಲಿ ಹೆಜ್ಜೆ ಹಾಕಿದರು ,ಹಳೆ ಹುಬ್ಬಳ್ಳಿ ಯ ಕಮ್ಯುನಿಸ್ಟ್ ಪಾರ್ಟಿ ಕಚೇರಿ ಮುಂಭಾಗದಲ್ಲಿ ನಡೆದ ಭಾರೀ ಬಹಿರಂಗ ಸಭೆಯಲ್ಲಿ ನಾನು ಮಾಡಿದ ಸ್ವಾಗತ ಭಾಷಣದ ನಂತರ ಅವರು ಸ್ಫೂರ್ತಿದಾಯಕವಾಗಿ ಮಾತಾಡಿದರು, ಇಂಥ ಜಾರ್ಜ್ ಫರ್ನಾಂಡೀಸ್ ಅವರನ್ನು ಭೇಟಿಯಾಗುವ ಅವಕಾಶವೂ ನನಗೆ ದೊರಕಿತ್ತು ,ಆಗ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರು, ಬೆಂಗಳೂರಿಗೆ ಬಂದು ರಿಚಮಂಡ್ ರಸ್ತೆಯ ತಮ್ಮ ಸೋದರನ ಮನೆಯಲ್ಲಿ ತಂಗಿದ್ದ ಅವರ…

Read More