ಗುರುವಿನ ಗೋಳು ಸರಕಾರಕ್ಕೆ ಕೇಳುತ್ತಿಲ್ಲವೆ?.

ಮಗುವುನಲ್ಲಿರುವ ಅಜ್ಞಾನವನ್ನು ಹೊಡೆದೋಡಿಸಿ, ಜ್ಞಾನವೆಂಬ ಮರ ಬೆಳೆಸುವ “ಗುರು”ವಿನ ಬದಿಕೀಗ ಬೀದಿಗೆ ಬಿಳುತ್ತಿದೆ. ಅದರಲ್ಲೂ ಮಕ್ಕಳು ವಯಸ್ಕರಾಗುವ ಸಮಯದಲ್ಲಿ ಸರಿ ದಾರಿ ತೋರುತ್ತಿರುವ ಪಿ.ಯು ಉಪನ್ಯಾಸಕರು ವೇತನ ತಾರತಮ್ಯದಲ್ಲಿ ಬದುಕು ನೂಕುವಂತಾಗಿದೆ. ವೇತನ ತಾರತಮ್ಯ ನಿವಾರಣೆಗೆ ಒತ್ತಾಯಿಸಿ ಹಲವಾರು ವರ್ಷದಿಂದ ಪಿ.ಯು. ಉಪನ್ಯಾಸಕರು ಮಂತ್ರಿ, ಶಾಸಕರು, ಅಧಿಕಾರಿಗಳ ಬಳಿ ಹಲವಾರು ಬಾರಿ ಅವಲೊತ್ತುಕೊಂಡಿದ್ದಾರೆ. ನ್ಯಾಯಯುತವಾದ ಬೇಡಿಕೆಯ ಈಡೇರಿಕೆಗಾಗಿ ಶಾಂತಿ, ಸಮಾಧಾನದಿಂದಲೆ ವಿನಂತಿಸಿಕೊಂಡು ಬಂದಿದ್ದಾರೆ. ಪರಸ್ಥಿತಿ ಕೈ ಮೀರಿ ಹೋದ ಕಾರಣ, ಬೇರೆ ದಾರಿ ಇಲ್ಲದ.ಮೌಲ್ಯ ಮಾಪನ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದಾರೆ. ಬೇಡಿಕೆಯ ಹಿನ್ನಲೆ: 1994 ರಲ್ಲಿ ವೇತನ ತಾರ್ಯತಮ್ಯದ ವಿರುದ್ಧ ಧ್ವನಿ ಎತ್ತಿದ ಉಪನ್ಯಾಸಕರು, 1996 ರಲ್ಲಿ ತೀವೃ ಸ್ವರೂಪವನ್ನು ಪಡೆದ ಕೊಂಡು 1996ರಲ್ಲಿ ಹೋರಾಟ ಕಾವು ಜೋರಾಗಿಯೇ ನಡೆಯಿತು. 1998, 2000 ರಲ್ಲಿ ಪಿ .ಯು. ಉಪನ್ಯಾಸಕರು ಮುಷ್ಕರ ನಡೆಸಿದಾಗ ಅವರ ಮೇಲೆ “ಎಸ್ಮಾ” ಎಂಬ…

Read More