ಹೈ.ಕ ಅಭಿವೃದ್ಧಿಗಾಗಿ ವಿಮೋಚನಾ ಚಳುವಳಿಯ ಆಶಯವನ್ನು ಮುಂದಕ್ಕೋಯ್ಯೋಣ.

ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಯಾಗಬೇಕು. ಈ ಭಾಗ ಆರ್ಥಕವಾಗಿ, ಸಮಾಜಿಕವಾಗಿ ಬಲಗೊಳ್ಳಬೇಕು. ಎಂಬ ಆಶಯದೊಂದಿಗೆ ನಡೆದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಆಶಯ ಆಶಯವಾಗಿಯೇ ಉಳಿದಿದೆ. ಪ್ರಭಲ ರಾಜಕಾರಣಿಗಳಿದ್ದರು ಅಭಿವೃದ್ಧಿಯ ಕಂಡಿಲ್ಲ. ಅಭಿವೃದ್ಧಿಯಾಗದಿರುವುದನ್ನೆ ರಾಜಕೀಯ ವಸ್ತುವನ್ನಾಗಿಸಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳ ಇಚ್ಚಾ ಶಕ್ತಿ ಕೊರತೆ ಎದ್ದು ಕಾಣುತ್ತಲೇ ಇದೆ. ಪ್ರಾದೇಶಕ ಅಸಮಾನತೆ ನಿವಾರಿಸುವಂತೆ ಪ್ರಭಲ ಹೋರಾಟಗಳು ನಡೆದಿವೆ. ಹೋರಾಟದ ಭಾಗವಾಗಿ 371(J) ಸ್ಥಾನಮಾನ ಸಿಕ್ಕಿದೆ ಯಾದರೂ ಅದು ಜಾರಿಗೊಂಡಿಲ್ಲ. ಜಾರಿಯಲ್ಲಿ ಅನೇಕ ತೊಡಕಗಳು ಎದುರಾಗುತ್ತಿವೆ. ಅವುಗಳನ್ನು ನಿವಾರಿಸುವಂತೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ, SFI, KPRS ಸಂಘಟನೆಗಳು ಹೋರಾಟ ನಡೆಸುತ್ತಲೇ ಇವೆ. ಜನರ ನಡುವೆ ಜಾಗೃತಿ ಮೂಡಿಸಲು ಸಂವಾದ, ವಿಚಾರ ಸಂಕೀರ್ಣ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಮಲಗಿರುವ ಸರಕಾರ ಮತ್ತು ಅಧಿಕಾರಿಗಳನ್ನು ಎಚ್ಚಿರಿಸಲು ಸಾಕಾಗುತ್ತಿಲ್ಲ. ಹೈ.ಕ ಅಭಿವೃದ್ಧಿಗಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (HKRDB) ರಚಿಸಿ ಐದು…

Read More