ಅಂಬೇಡ್ಕರ ಆಶಯ ಜಾರಿಯಾಗಲಿ : ಎಸ್.ಎಫ್.ಐ

ಡಾ. ಬಿ.ಆರ್.ಅಂಬೇಡ್ಕರ್ ರವರ ಪರಿನಿರ್ವಾಣ ದಿನವನ್ನು ಎಸ್.ಎಫ್.ಐ ಜಿಲ್ಲಾ ಸಮಿತಿಯಿಂದ ಶಾರದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಡಾ. ಬಿ.ಆರ್.ಅಂಬೇಡ್ಕರ್ ರವರು ಎಲ್ಲರಿಗೂ ಶಿಕ್ಷಣ ಸಿಗಬೇಕು ಉದ್ಯೋಗ ಸಿಗಬೇಕು ಎನ್ನುವ ಮೂಲ ಪರಿಕಲ್ಪನೆಯನ್ನು ಕಟ್ಟಿಕೊಟ್ಟವರು. ಶಿಕ್ಷಣ ಮತ್ತು ಉದ್ಯೋಗ ಜನರ ಮೂಲಭೂತ ಹಕ್ಕಾಗಿರಬೇಕು ಆ ಹಕ್ಕನ್ನು ನೀಡುವ ಕೆಲಸವನ್ನು ಆಳುವ ಸರಕಾರಗಳು ಮಾಡಬೇಕು. ಹಾಗೂ ಅಸಮಾನ ಶಿಕ್ಷಣ ನಿವಾರಣೆಯಾಗಿ ಸಮಾನ ಶಿಕ್ಷಣ ದೊರೆಯಬೇಕು ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಆದರೆ ಆಳುವ ಸರಕಾರUಳು ಜಾರಿ ಮಾಡದರಿವುದು ದುರಂತವೇ ಸರಿ. ಆರ್ಥಿಕ, ರಾಜಕೀಯ, ಶೈಕ್ಷಣಿಕ ಅಸಮಾನತೆ ನಿವಾರಣೆ ಮಾಡಿ ಜಗತ್ತಿನಲ್ಲಿ ಭಾರತ ತನ್ನದೆ ಆದ ಸ್ಥಾನವನ್ನು ಪಡೆಯಲು ಶಕ್ತಿ ಇದೆ. ಆಳುವ ಸರಕಾರಗಳಿಗೆ ಇಚ್ಚೆ ಇಲ್ಲದ ಕಾರಣ ನಾವಿಂದು ಪರದಾಡುವಂತಾಗಿದೆ ಎಂದರು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಗೌರಮ್ಮ ಪತ್ತಾರ…

Read More