ಇವರೇಕೇ ಇಷ್ಟು ಅಜ್ಞಾನಿಗಳು…? -ಕೆ.ಎಲ್.ಚಂದ್ರಶೇಖರ್ ಐಜೂರು

KL Chandrashekhar Aijoor ಈ ಮಣ್ಣಿನ ಮೇರುನಟ ಡಾ.ರಾಜ್ಕುಮಾರ್ ಕಿಡ್ನ್ಯಾಪ್ ಆಗಿ ಇಪ್ಪತ್ತೈದು ದಿನಗಳಾಗಿದ್ದವು. ನಾನು ಅದೇ ಆಗಷ್ಟೇ ಬೆಂಗಳೂರಿನ University Law Collegeನಲ್ಲಿ ಮೊದಲ ವರ್ಷದ LL.B.ಗೆ ಪ್ರವೇಶ ಪಡೆದಿದ್ದೆ. ಬೆಂಗಳೂರಿನ ಶಾಲಾಕಾಲೇಜುಗಳಿಗೆ ಒಂದು ತಿಂಗಳ ಕಾಲ ರಜೆ ಘೋಷಿಸಲಾಗಿತ್ತು. ರಜೆಯ ಕಾರಣ ನಾನು ನಮ್ಮೂರು ರಾಮನಗರದಲ್ಲಿದ್ದೆ. ಅದು ಇಸವಿ 2000. ಆಗ ಈಗಿನಂತೆ, ಈಗಿರುವಷ್ಟು ಮನೆಮುರುಕ ಟೀವಿ ಚಾನಲ್’ಗಳು ಇರಲಿಲ್ಲ. ಆದರೂ ‘ಡಾ.ರಾಜ್ ಬಿಡುಗಡೆಗೆ ವೀರಪ್ಪನ್ 50 ಕೋಟಿ ಕೇಳ್ದ; 100 ಕೋಟಿಗೆ ಬೇಡಿಕೆ ಇಟ್ಟಿದ್ದಾನೆ’ ಎಂಬೆಲ್ಲ ಸುದ್ದಿಗಳು ಜನರ ಬಾಯಿಂದ ಬಾಯಿಗೆ ಸಲೀಸಾಗಿ ಹರಿದಾಡುತ್ತಿದ್ದವು. ಡಾ.ರಾಜ್ ಅಪಹರಣಗೊಂಡ ಕ್ಷಣದಿಂದ ಅವರ ಬಿಡುಗಡೆಯ ತನಕ ಈ ನಾಡು ತೀವ್ರ ಆಘಾತಕ್ಕೊಳಗಾಗಿತ್ತು. ಇಡೀ ರಾಜ್ ಕುಟುಂಬ ರೇಡಿಯೋ ಮೂಲಕ ಪ್ರತಿದಿನ ‘ಅಣ್ಣೈ ವೀರಪ್ಪಣೈ… ನಾ ವುನ್ ತಂಗಾಚಿ ಮಾದ್ರಿ, ನಾ ವುಂಗಳ್ ತಂಬಿ ಮಾದ್ರಿ ನೆನಚಿಕೋ’…

Read More