ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ

ಬಿಜೆಪಿ ಪರೋಕ್ಷವಾಗಿ ಹೇಳುವ ಸಂಘ ಪರಿವಾರದ ಹಿಂದೂರಾಷ್ಟ್ರ ನಿರ್ಮಾಣದ ಘೋಷಣೆಯೇ ಸಂವಿಧಾನ ವಿರೋಧಿಯಾಗಿದೆ. ಭಾರತವು ಎಲ್ಲ ಧರ್ಮಗಳಿಗೆ ಸೇರಿದ ದೇಶ ಎಂದು ಸಂವಿಧಾನ ಸಾರಿದೆ. ಭಾರತ ಸಾರ್ವಭೌಮ ಸಮಾಜವಾದಿ ಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯ ವಾಗಿಯೇ ಮುಂದುವರಿಯುತ್ತದೆ. ಹಾಗೆ ಮುಂದುವರಿದರೆ ಮಾತ್ರ ಈ ದೇಶ ಸುರಕ್ಷಿತವಾಗಿರುತ್ತದೆ. ಭಾರತದ ದಮನಿತ ಸಮುದಾಯ ಸ್ವಾತಂತ್ರಾನಂತರ ಇದೇ ಮೊದಲ ಬಾರಿ ಅತ್ಯಂತ ಆತಂಕದ ಕ್ಷಣಗಳನ್ನು ಎದುರಿಸುತ್ತಿದೆ. ತಮಗೆ ರಕ್ಷಾ ಕವಚವಾದ ಸಂವಿಧಾನವನ್ನೇ ಬುಡಮೇಲು ಮಾಡಲು ನಡೆದಿರುವ ಮಸಲತ್ತುಗಳ ಬಗ್ಗೆ ಒಂದು ವಿಧದ ಭೀತಿಯ ವಾತಾವರಣ ಉಂಟಾಗಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಸಂವಿಧಾನವನ್ನು ಇಟ್ಟುಕೊಂಡೇ ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಡೆದ ಸಂವಿಧಾನ ವಿರೋಧಿ ಚಟುವಟಿಕೆಗಳು ಹಾಗೂ ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂಬ ಕೇಂದ್ರ ಸಚಿವರ ಮಾತುಗಳು ಸಹಜವಾಗಿ ಅವಕಾಶ ವಂಚಿತ ಸಮುದಾಯದಲ್ಲಿ ಮುಂದೇನಾಗುತ್ತದೆ ಎಂಬ ಆತಂಕ ಉಂಟು ಮಾಡಿದೆೆ. ಶತಮಾನಗಳ ಕಾಲದ ಅಸಮಾನತೆಯ ಅಂಧಕಾರ…

Read More