ಲಿಬಿಯದ ಮಾಜಿ ಸರ್ವಾಧಿಕಾರಿ ಗುಂಡಿಗೆ ಬಲಿ

ಸಿರ್ತೆ(ಲಿಬಿಯ), ಅ.20: ಲಿಬಿಯದ ಮಾಜಿ ನಾಯಕ ಮುವಮ್ಮರ್ ಗದಾಫಿ ಗುರುವಾರ ನ್ಯಾಟೋ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಗದಾಫಿಯನ್ನು ಸಿರ್ತೆಯ ಬಳಿ ಸೆರೆ ಹಿಡಿದ ಬೆನ್ನಿಗೇ ಅವರ ಮರಣದ ವಾರ್ತೆ ಹೊರ ಬಿದ್ದಿದೆ. ಈ ಮೂಲಕ ಲಿಬಿಯದ ನಾಲ್ಕು ದಶಕಗಳ ಗದಾಫಿ ಯುಗ ಅಂತ್ಯಗೊಂಡಂತಾಗಿದೆ. ಗದಾಫಿ ವಿರೋಧಿ ಹೋರಾಟಗಾರರು ಅವರ ತವರು ಪಟ್ಟಣ ಸಿರ್ತೆಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮ 8 ತಿಂಗಳ ಸುದೀರ್ಘ ಹೋರಾಟವನ್ನು ಅಂತ್ಯಗೊಳಿಸುವತ್ತ ಸಾಗಿದ್ದಾರೆ. ಗದಾಫಿ ಗಾಯಗಳಿಂದಾಗಿ ಅಸು ನೀಗಿದ್ದಾರೆಂದು ಅಲ್ಲಿನ ತಾತ್ಕಾಲಿಕ ಆಡಳಿತಗಾರರು ತಿಳಿಸಿದ್ದಾರೆ. ಗದಾಫಿಯನ್ನು ಸಿರ್ತೆಯ ಬಳಿ ಸೆರೆ ಹಿಡಿದೊಡನೆಯೇ ಅವರ ಮರಣ ವಾರ್ತೆ ಬಂದುದು, ಈಜಿಪ್ಟ್ ಹಾಗೂ ಟ್ಯುನೀಶಿಯಗಳ ಆಡಳಿತಗಾರರನ್ನು ಪದಚ್ಯುತಗೊಳಿಸಿದ ಮತ್ತು ಸಿರಿಯ ಹಾಗೂ ಯೆಮೆನ್‌ಗಳ ನಾಯಕರ ಮೇಲೆ ಹಿಡಿತ ಸಾಧಿಸುವ ಬೆದರಿಕೆಯೊಡ್ಡಿರುವ ‘ಅರಬ್ ಸ್ಪ್ರಿಂಗ್’ ಬಂಡಾಯದ ಏಕೈಕ ಅತ್ಯಂತ ನಾಟಕೀಯ ಬೆಳವಣಿಗೆಯಾಗಿದೆ. ಗದಾಫಿಗೆ ತಲೆಗೆ ಗಾಯವಾಗಿತ್ತು. ಅವರ…

Read More