ತುಂಗಭದ್ರಾ: ಜು. ೨೫ ರಿಂದ ಬಲದಂಡೆ, ೨೭ ರಿಂದ ಎಡದಂಡೆ ಕಾಲುವೆಗೆ ನೀರು

ಕೊಪ್ಪಳ ಜುಲೈ : ತುಂಗಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿಗಾಗಿ ಈ ಬಾರಿ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೨೫ ರಿಂದ ಹಾಗೂ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹಾಗೂ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೨೭ ರಿಂದ ನೀರು ಬಿಡಲಾಗುವುದು ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ (ಕಾಡಾ) ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರು ಹೇಳಿದ್ದಾರೆ. ಮುನಿರಾಬಾದಿನ ಕಾಡಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಕಳೆದ ೨೦೦೬ ರಲ್ಲಿ ನಡೆದ ತುಂಗಭದ್ರಾ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಿರುವಂತೆ ಪರಿಷ್ಕೃತ ಸಾಮರ್ಥ್ಯ ಪಟ್ಟಿಯನ್ವಯ ಜಲಾಶಯದ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯವು ೧೦೪. ೩೪೦ ಟಿ.ಎಂ.ಸಿ. ಆಗಿದೆ. ಕಳೆದ ಜೂ. ೧೫ ರಂದು ತುಂಗಭದ್ರಾ ಮಂಡಳಿ ಟಿ.ಬಿ.…

Read More