ಟೀಕೆಗಳಿಗೆ ಕೆಲಸವೇ ಉತ್ತರ ನೀಡಬೇಕು – ಶೇಖರಗೌಡ ಮಾಲೀಪಾಟೀಲ್.

kannadanet-new-logo-1
ಕೊಪ್ಪಳ-03-  ಸಂಘಟನೆ ಎಂದ ಮೇಲೆ ಟೀಕೆಗಳು ಸಹಜ. ಆದರೆ ಸಂಘಟನಾಕಾರರು ಟೀಕೆಗಳಿಗೆ ಅಳುಕದೇ ಕೆಲಸ ಮಾಡಬೇಕು. ಕೆಲಸಗಳೇ ಟೀಕೆಗಳಿಗೆ ಉತ್ತರ ಕೊಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಘಟಕದ ಸಂಘ ಸಂಸ್ಥೆಗಳ ಪ್ರತಿನಿಽ ಹಾಗೂ ಸಹಕಾರಿ ಮಹಾಮಂಡಳದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲೀಪಾಟೀಲ್ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮುಖಂಡರು ಭಾನುವಾರ ನಗರದಲ್ಲಿ ಅವರನ್ನು ಸತ್ಕರಿಸಿದ ಸಂದರ್ಭದಲ್ಲಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ನಿರೀಕ್ಷೆಯಂತೆ ಜಿಲ್ಲೆಯ ಕನ್ನಡದ ಮನಸ್ಸುಗಳು ನಮ್ಮನ್ನ ಬೆಂಬಲಿಸಿವೆ. ರಾಜ್ಯಕ್ಕೆ ಇಲ್ಲಿನ ಕಸಾಪ ಘಟಕವು ಮಾದರಿಯಾಗುವಂಥ ಕೆಲಸಗಳನ್ನ ಮಾಡುವ ಗುರಿ ಹೊಂದಬೇಕು. ಗೆದ್ದಾಕ್ಷಣ, ಮುಂದಿರುವ ಜವಾಬ್ದಾರಿಗಳ ಬಗ್ಗೆ ಉದಾಸೀನತೆ ಭಾವ ಸಲ್ಲದು ಎಂದು ಅವರು ಜಿಲ್ಲಾ ಘಟಕಕ್ಕೆ ಕಿವಿ ಮಾತು ಹೇಳಿದರು.ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ, ಶೇಖರಗೌಡ ಮಾಲೀಪಾಟೀಲ್ ಅವರು ಈ ಸಲದ ಚುನಾವಣೆಯಲ್ಲಿ ಶತಪ್ರಯತ್ನ ಮಾಡಿ ರಾಜಶೇಖರ ಗೆಲುವಿಗೆ ಶ್ರಮಿಸಿದ್ದಾರೆ. ಜೊತೆಗೆ ಈ ಸಲದ ಕಸಾಪದಲ್ಲೂ ಅವರು ಕೇಂದ್ರ ಸಮಿತಿಯಲ್ಲಿ ಸ್ಥಾನ ಪಡೆದಿರುವುದು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಆಗುವ ಕನ್ನಡದ ಕೆಲಸಗಳಿಗೆ ಸೂರ್ತಿ ತಂದಂತಾಗಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಅಂಗಡಿ, ಹುಲಗಪ್ಪ ಕಟ್ಟಿಮನಿ, ಗೀರೀಶ್ ಪಾನಘಂಟಿ, ಗವಿಸಿದ್ಧಪ್ಪ ಹುಡೇಜಾಲಿ, ರಮೇಶ್ ತುಪ್ಪದ್, ರಾಜಶೇಖರ ಅಂಗಡಿ ಇತರರು ಇದ್ದರು. ಸಂತೋಷ ದೇಶಪಾಂಡೆ ನಿರೂಪಿಸಿದರು. ಶಿವಕುಮಾರ ಕುಕನೂರು ವಂದಿಸಿದರು.

 

Please follow and like us: