ಕೊಪ್ಪಳ ಮನೆಗಳ್ಳರ ಬಂಧನ : ಲಕ್ಷಾಂತರ ಮೌಲ್ಯದ ಬಂಗಾರ ವಶ

ಕೊಪ್ಪಳ : ಕೊಪ್ಪಳ ನಗರದ ಕಲ್ಯಾಣನಗರ ಹಾಗೂ ಗಣೇಶನಗರದಲ್ಲಿ ನಡೆದ ಮನೆಗಳ್ಳತನ ಪ್ರಕರಣ ಭೇದಿಸಿರುವ ಕೊಪ್ಪಳ ಪೋಲಿಸರು ಇಬ್ಬರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಬಂಗಾರ ಆಭರಣಗಳ ನ್ನು ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ನಗರದ ಕಲ್ಯಾಣನಗರ ಹಾಗೂ ಗಣೇಶನಗರದಲ್ಲಿ ನಡೆದ ರಾತ್ರಿ ಕನ್ನಾ ಕಳುವು ಮಾಡಿದ ಕಳ್ಳರ ಬಂಧನ ಆರೋಪಿತರಿಂದ ಸುಮಾರು ರೂ: 7,90,000=00 ಬೆಲೆ ಬಾಳುವ 155 ಗ್ರಾಂ ಬಂಗಾರದ ಆಭರಣಗಳು ಹಾಗೂ ನಗದು ಹಣ ರೂ. 5000/- ವಶಪಡಿಸಿಕೊಳ್ಳಲಾಗಿದೆ.

ದಿನಾಂಕ: 26.01.2023 ರ ರಾತ್ರಿ ವೇಳೆಯಲ್ಲಿ ಕೊಪ್ಪಳ ನಗರದ ಕಲ್ಯಾಣನಗರ ಹಾಗೂ ಗಣೇಶನಗರದಲ್ಲಿ ಒಟ್ಟು 4 ಮನೆ ಕಳ್ಳತನಗಳು ನಡೆದಿದ್ದವು. , ಈ ಬಗ್ಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಿಸಿ ತನಿಖೆ ಕೈಗೊಂಡು ಪೋಲಿಸರು ಆರೋಪಿತರಾದ (1) ಪುರುಷೋತ್ತಮ ನಾಯ್ಕ ತಂದೆ ಮಂಜಾ ನಾಯ್ಕ ವಿಜಯ ಮಾಳಾ ತಂದೆ ರವಿಕುಮಾರ ಚಿತ್ರದುರ್ಗಾ. ಅಜಯ ತಂದೆ ಬಸವರಾಜ ನಾಯ್ಕ ರವರನ್ನು ವೈಜ್ಞಾನಿಕ ವಿಧಾನಗಳ ಮುಖಾಂತರ ವಿಚಾರಣೆ ಮಾಡಿ ದಸ್ತಗಿರಿ ಮಾಡಿ ಸುಮಾರು ರೂ: 7,90,000=00 ಬೆಲೆ ಬಾಳುವ 155 ಗ್ರಾಂ ಬಂಗಾರದ ಆಭರಣಗಳು ಹಾಗೂ ನಗದು ಹಣ ರೂ: 5,000=00 ಗಳನ್ನು ವಶಪಡಿಸಿಕೊಂಡಿದ್ದಾರೆ.

ಮನೆಗಳ್ಳತನ ಪ್ರಕರಣವನ್ನು ಬೇಧಿಸಲು ಎಸ್ಪಿ ಅರುಣಾಂಗ್ಷುಗಿರಿ ಗಿರಿ, ಡಿಎಸ್ಪಿ ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಕೊಪ್ಪಳ ನಗರ ಪೊಲೀಸ್‌ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸಂತೋಷ ಡಿ ಹಳ್ಳೂರ, ಸಿಬ್ಬಂದಿಯವರಾದ ಖಾಜಾಸಾಬ ಹೆಚ್‌ಸಿ, ಸುಭಾಸ ಹೆಚ್‌ಸಿ, ಚನ್ನವೀರ ಹೆಚ್ಚಿಸಿ, ಅಶೋಕ ಹೆಚ್.ಸಿ, ಕೋಟ್ರಯ್ಯ ಪಿಸಿ, ಹನುಮೇಶ ಸಿಪಿಸಿ, ಬಸವರಾಜ ಎ.ಪಿ.ಸಿ ಹಾಗೂ ಸಿಡಿಆರ್ ವಿಭಾಗದ ಕೋಟೇಶ ಸಿಹೆಚ್‌ಸಿ ಮತ್ತು ಬೆರಳು ಮುದ್ರೆ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಶ್ರಮಿಸಿ ಯಶಸ್ವಿಯಾಗಿದ್ದಾರೆ ಇವರಿಗೆ ಎಸ್ಪಿಯವರು ಶ್ಲಾಘನೆ ಮಾಡಿದ್ದಾರೆ.

Please follow and like us: