ಭೀಮಾ ಕೊರೇಗಾವ್ ವಿಜಯೋತ್ಸವ ಮತ್ತು ಸಾವಿತ್ರಿ ಬಾಫುಲೆ ಜಯಂತೋತ್ಸವ

ಸಾವಿತ್ರಿಬಾ ಪುಲೆ ಜಯಂತೋತ್ಸವ ಆಚರಣೆ

ಗಂಗಾವತಿ: ಗಂಗಾವತಿ ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಕೃಷ್ಣಾ ಫಂಕ್ಷನ್ ಹಾಲ್‌ನಲ್ಲಿ ಸಿದ್ದಾರ್ಥ ಎಜುಕೇಷನ್ & ಸೋಶಿಯಲ್ ವೆಲ್‌ಫೇರ್ ಟ್ರಸ್ಟ್ ಸಂಸ್ಥೆ (ರಿ) ಮತ್ತು ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಗಂಗಾವತಿ ಇವರ ಸಂಯುಕ್ತಾಶ್ರಮದಲ್ಲಿ ಭೀಮಾ ಕೊರೇಗಾವ್ ವಿಜಯೋತ್ಸವ ಮತ್ತು ಸಾವಿತ್ರಿ ಬಾಫುಲೆ ಜಯಂತೋತ್ಸವವನ್ನು ಆಚರಿಸಲಾಯಿತು
ಈ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಜನಪ್ರಿಯ ಶಾಸಕ ಪರಣ್ಣ ಮುನವಳ್ಳಿಯವರು ಭಾರತ ದೇಶದಲ್ಲಿ ದೇಶ, ಭಾಷೆ ಮತ್ತು ಸಿರಿ ಸಂಪತ್ತಿಗಾಗಿ ಹಲವು ರಾಜಾಧಿರಾಜರು ಭೂಮಿ ಮೇಲೆ ಯುದ್ಧ ಮಾಡಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಭಾರತ ದೇಶದಲ್ಲಿ ಕಂಡು ಕಾಣರಿಯದಂತಹ ಸ್ವಾಭಿಮಾನದ ಇತಿಹಾಸವನ್ನು ಭೂಗರ್ಭದಿಂದ ಹೆಕ್ಕೆ ತೆಗೆದ ಕೀರ್ತಿ ಭಾರತರತ್ನ ಭೇದಿಸತ್ವ ಡಾ. ಭೀಮರಾವ್ ಅಂಬೇಡ್ಕರ್‌ರವರಿಗೆ ಸಲ್ಲುತ್ತದೆ. ೦೧ನೇ ಜನೇವರಿ ೧೮೧೮ನೇ ಇಸವಿಯಲ್ಲಿ ನಡೆದ ಭೀಮಾ ಕೊರೇಗಾಂವ್ ವಿಜಯೋತ್ಸವದ ಬಗ್ಗೆ ನಾವೆಲ್ಲರೂ ತಿಳಿಯಬೇಕು ಎಂದು ಹೇಳಿದರು.
ಅಕ್ಷರದವ್ವ ಭಾರತದ ದೇಶದಲ್ಲಿ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಶೋಷಿತರ ಹಿಂದುಳಿದವರ ದುರ್ಬಲರ ಆಶಾಕಿರಣ ಎಂದೇ ಹೆಸರಾದ ಮಾತೆ ಸಾವಿತ್ರಿಬಾಯಿ ಫುಲೆರವರ ೧೯೨ನೇ ಜಯಂತಿ ಮಾತೆ ಸಾವಿತ್ರಿ ಬಾಫುಲೆರವರು ಈ ದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ, ಹೆಪ್ಪುಗಟ್ಟಿದ ಈ ಸಮಾಜಕ್ಕೆ ಎದುರಾಗಿ ನಿಂತು, ನೋವು, ಅವಮಾನಗಳನ್ನು ಮೆಟ್ಟಿನಿಂತು, ಹೆಣ್ಣುಮಕ್ಕಳಿಗೆ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ದಿಟ್ಟ ಮಹಿಳೆ, ಅಕ್ಷರದವ್ವ ಮಾತೆಸಾವಿತ್ರಿ ಬಾಯಿಫುಲೆ ಅವರು ೧/೩/೧೮೩೧ ಅವರ ಜನ್ಮದಿನವಾಗಿದ್ದು, ನಾವು ಅವರ ಸಾಮಾಜಿಕ ಪರಿವರ್ತನೆಯ ಹೋರಾಟದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಅವಶ್ಯಕವಾಗಿದ್ದು, ಅಲ್ಲದೇ ಈಗಿನ ಯುವಜನತೆಗೆ ಇತಿಹಾಸವನ್ನು ತಿಳಿಸುವುದು ನಮ್ಮ ಕರ್ತವ್ಯವಾಗಿದೆ.
ಸಿದ್ದಾರ್ಥ ಎಜುಕೇಷನ್ & ಸೋಶಿಯಲ್ ವೆಲ್‌ಫೇರ್ ಟ್ರಸ್ಟ್ ಸಂಸ್ಥೆ (ರಿ) ಯ ಅಧ್ಯಕ್ಷರಾದ ಪಂಪಾಪತಿ ಹಂಚಿನಾಳ ಮತ್ತು ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ರಗಡಪ್ಪ ಈ ಜಯಂತ್ಯೋತ್ಸವದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿದ್ದಕ್ಕಾಗಿ ಸರ್ವರಿಗೂ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಮತ್ತು ಹಿರಿಯ ಹೋರಾಟಗಾರ ಭಾರಧ್ವಜ ಮತ್ತು ಡಾ. ಈರಮ್ಮ ನಿರುಪಾದಿ, ಬಸವರಾಜ ಮ್ಯಾಗಳಮನಿ, ವಿರೂಪಾಕ್ಷಪ್ಪಗೌಡ ನಾಯಕ, ಶಂಭುನಾಥ್ ದೊಡ್ಡಮನಿ, ಶೇಖ್ ನಬಿಸಾಬ, ಕೆ. ಅಂಬಣ್ಣ, ಶಂಕರ ಆಟೋ, ಚನ್ನಬಸವ ಮಾನ್ವಿ, ಮರಿಸ್ವಾಮಿ, ಯಮನೂರ, ವಸಂತ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು ಎಂದು ಟ್ರಸ್ಟ್‌ನ ಸದಸ್ಯರಾದ ಹೆಚ್.ಸಿ ಹಂಚಿನಾಳ ಪ್ರಕಟಣೆಯಲ್ಲಿ ತಿಳಿಸಿದರು.

Please follow and like us: