
ಕೊಪ್ಪಳ ಫೆ ೦೧: ಹೆಣ್ಣು ಕೇವಲ ಹೆಣ್ಣು ಅಲ್ಲ, ಆಕೆ ಸಹನಮೂರ್ತಿ, ಆಕೆಯಿಂದ ಕುಟುಂಬದ ಕಣ್ಣು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ ಎಸ್ ರೇಖಾ ಹೇಳಿದರು.
ಅವರು ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾದಿಂದ ಆಯೋಜಿಸಿದ್ದ ಕೊಪ್ಪಳ ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗು ಕರಕುಶಲ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಕುಟುಂಬದಲ್ಲಿ ತಾಳ್ಮೆಯಿಂದ ಕುಟುಂಬ ನಿರ್ವಹಣೆ ಇದೇ ವೇಳೆ ಮಹಿಳೆ ಸಮಾಜಮುಖಿಯಾಗಿ ಕೆಲಸ ಮಾಡಿ, ಉಳಿದ ಸಮಯದಲ್ಲಿ ಕರಕುಶಲ ವಸ್ತುಗಳ ತಯಾರಿಕೆಯಿಂದಾಗಿ ಒಂದಿಷ್ಟು ಆರ್ಥಿಕ ಸಬಲತೆ ಹೊಂದಬಹುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ವಿಭಾಗದ ನಿರ್ದೇಶಕರಾದ ಬಿ ಗಣೇಶ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮ ಹಾಗು ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಡೆಯವರ ಪತ್ನಿ ಹೇಮಾವತಿಯವರ ಕಲ್ಪನೆಯಿಂದ ಮಹಿಳೆಯರು ಉಳಿತಾಯ ಹಾಗು ಸ್ವಾವಲಂಭಿಯಾಗಿದ್ದಾರೆ. ಹಲವು ನಿರ್ಗತಿಕರು ಸ್ವಯಂ ಉದ್ಯೋಗದಿಂದ ಕುಟುಂಬ ನಿರ್ವಹಣೆಯಿಂದ ನೆಮ್ಮದಿಯಿಂದ ಇದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ದೇವೇಂದ್ರ ಪಂಡಿತ, ಶ್ರೀನಿವಾಸ ಗುಪ್ತಾ, ಶ್ರೀಮತಿ ಶಾರಾದ ಪಾನಗಂಟಿ, ಶ್ರೀಮತಿ ರಾಧ ಕುಲಕರ್ಣಿ, ತ್ರಿಶೂಲಾ ಸುರೇಂದ್ರ, ಜಿಲ್ಲಾ ಯೋಜನಾ ನಿರ್ದೇಶಕರಾದ ಸದಾನಂದ ಬಂಗೇರ ಇದ್ದರು. ಈ ಸಂದರ್ಭದಲ್ಲಿ ಮಹಿಳಾ ಕಾನೂನು ಅರಿವು ಹಾಗು ನೆರವು ಕುರಿತು ವಕೀಲ ಹನುಮಂತರಾವ್ ಕೆಂಪಳ್ಳಿ ಉಪನ್ಯಾಸ ನೀಡಿದರು.
ಜಗದೀಶ ಕಾರ್ಯಕ್ರಮ ನಿರೂಪಿಸಿದರು ತಾಲೂಕಿನ ಸೇವಾ ಪ್ರತಿನಿಧಿಗಳು ಹಾಗು ಸಿಬ್ಬಂದಿಗಳು ಭಾಗವಹಿಸಿದ್ದರು.
ಫೋಟೊ