ನಾನೇನು ತಪ್ಪು ಮಾಡಿದ್ದೇನೆ ನನಗ್ಯಾಕೆ ಬಹುಮತ ನೀಡುತ್ತಿಲ್ಲ- ಎಚ್ಡಿಕೆ

ಕುಷ್ಟಗಿಯಲ್ಲಿ ತುಕಾರಾಮ ಸುರ್ವೆ ನೇತೃತ್ವದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ

ಕೊಪ್ಪಳ : ಪಂಚರತ್ನಯಾತ್ರೆಯ 58 ನೇ ಕಾರ್ಯಕ್ರಮ ಕುಷ್ಟಗಿಯಲ್ಲಿ ಅಭ್ಯರ್ಥಿ ತುಕಾರಾಮ್ ಸೂರ್ವೆ ಚೆನ್ನಾಗಿ ಆಯೋಜಿನೆ ಮಾಡಿದ್ದಾರೆ
ಕುಷ್ಟಗಿಯಲ್ಲಿ ಪಕ್ಷದ ಸಂಘಟನೆಯಿಲ್ಲ ಎಂಬ ಮಾತುಗಳು ಇದ್ದವು ಇದನ್ನು ತುಕಾರಾಮ್ ಮತ್ತು ಜೆಡಿಎಸ್ ನ ಮುಖಂಡರು ಸಂಘಟನೆ ಮಾಡಿ ತೋರಿಸಿದ್ದಾರೆ. ಈ ಭಾಗದ 26 ಕ್ಷೇತ್ರಗಳಲ್ಲಿ ಮಹಿಳೆಯರು ಪೂರ್ಣಕುಂಬ ಕಳಸದಿಂದ ಸ್ವಾಗತ ಕೋರಿದ್ದಾರೆ ತಾಯಂದಿರ ಕಷ್ಟಗಳನ್ನ ಕಂಡಿದ್ದೇನೆ ಉತ್ತರ ಕರ್ನಾಟಕದ ಹಳ್ಳಿಗಳು ಅತ್ಯಂತ ಹಿಂದುಳಿದಿವೆ ನದಿಯ ನೀರನ್ನ ನಿಮ್ಮ ಜಮೀನಿಗೆ ಹರಿಸುವಲ್ಕಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ ಶೌಚಾಲಯ ನಿರ್ಮಾಣ ಕೇವಲ ಕಾಗದದಲ್ಲಿವೆ ಮಹಿಳೆಯರು ಬಹಿರ್ದೆಸೆಗೆ ಕತ್ತಲಾಗುವವರಗೆ ಕಾಯುವಂತ ದುಸ್ಥಿತಿ ಇದೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದಾಗ ಸಿಗಲಿದೆ ರಾಜ್ಯದ ಪ್ರತಿ ಕುಟುಂಬದ ಆದಾಯ ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ನೀಡುವೆ ಇದಕ್ಕಾಗಿ ಎರಡುವರೆ ಲಕ್ಚ ಕೋಟಿ ಬೇಕಿದೆ ಸಂಪೂರ್ಣ ಬಹುಮತದ ಸರ್ಕಾರ ಬಂದ್ರೆ ಮಾತ್ರ ಮಾಡಲು ಸಾದ್ಯ, ನನ್ನ ಹತ್ರ ಶ್ರೀಮಂತರ್ಯಾರು ಬರಲ್ಲ ಬಡ ಜನರು ಕುಟುಂಬದ ಸಮಸ್ಯೆಗೆ ನೆರವು ನೀಡುವಂತೆ ಕಣ್ಣೀರಿಡುತ್ತಾರೆ

ರೈತರು ಮಾಡಿದ ಸಾಲ ತೀರಿಸಲು ಶಕ್ತಿ ತುಂಬುವಂತೆ ಕೇಳುತ್ತಾರೆ

ಕಲ್ಯಾಣ ಕರ್ನಾಟಕ ಹೆಸರಿಗಷ್ಟೆ ಸೀಮಿತವಾಗಿದೆ

ಸೇಡಂ ಶಾಸಕ ರಾಜಕುಮಾರ ತೆಲೂರು ನನ್ನಹತ್ರ ಬಂದು‌ ಕಲ್ಯಾಣ ಕರ್ನಾಟಕ ಹೆಸರಿಡುವಂತೆ ಕೇಳಿದ್ದರು.

ಜನರ ಬದಕು ಸರಿ ಪಡಿಸಿ, ಗೌರವದಿಂದ ಬಾಳುವಂತೆ ಮಾಡಿದ ಮೇಲೆ ಕಲ್ಯಾಣ ಕರ್ನಾಟಕ ಎಂದು ಹೆಸರಿಡೋಣ ಎಂದಿದ್ದೆ. ಕಾಂಗ್ರೆಸ್ ನಡೆಗೆ ಕ್ರಿಷ್ಣಾ ಕಡೆಗೆ ಅದು‌ಕ್ರಿಷ್ಣಾ ಕಡೆಗಲ್ಲ ಆಂಧ್ರಪ್ರದೇಶದ ಕಡೆಗೆ ಎಂದಿದ್ದೆ

ತುಂಗಭದ್ರಾ ಜಲಾಶಯದಲ್ಲಿ ಗಣಿಗಾರಿಕೆಯ ಮಣ್ಣು ತುಂಬಿ ಶೇ 33 ರಷ್ಟು ಹೂಳು ತುಂಬಿ ನೀರಿನ ಕೊರತೆಯಾಗಿ ಕೊನೆ ಭಾಗಕ್ಕೆ ನೀರು ಸಿಗದೆ ರೈತರು ಪರದಾಡುತ್ತಿದ್ದಾರೆ

ಕುಷ್ಟಗಿಯ ಒಣ ಭೂಮಿಗೆ ನೀರೊದಗಿಸಿ ಕೊಡುವ ಯೋಜನೆ ರೂಪಿಸಬೇಕಿದೆ
ಕುಷ್ಟಗಿಯ ಜಮೀನಿಗೂ ನೀರಾವರಿ ಮಾಡುವ ಚಿಂತನೆ ಮಾಡುತ್ತಿರುವೆ

ಬಡ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ಕೊಡಲು ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆ ಆರಂಭಿಸಲಾಗುವುದು

ಮಾರಾಣಾಂತಿಕ ಖಾಯಿಲೆಗೆ ತುತ್ತಾದ ಬಡ ಜನರಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗದೆ ಅಸಹಾಯಕರಾಗಿ ನನ್ನ ಹತ್ರ ಬರ್ತಾರೆ

ಇದನ್ನ ತಪ್ಪಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ 30 ಹಾಸಿಗೆಯ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಿಸಿ ಉಚಿತ ಚಿಕಿತ್ಸೆ ಕೊಡುವ ಉದ್ದೇಶವಿದೆ
ಬಡ ಜನರ ಬದುಕು ಸರಿಪಡಿಸಲು ನನಗೆ ಬಹುಮತದ ಸರ್ಕಾರ ರಚಿಸಲು ಅವಕಾಶ ಕೊಡಿ

ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ಮಾಡಿದಾಗ ಸರಾಯಿ ಮತ್ತು ಲಾಟರಿ ನಿಷೇಧ ಮಾಡಿದ್ದೆ

ವಿದ್ಯಾರ್ಥಿಗಳಿಗೆ ಸೈಕಲ್ ಕೊಟ್ಟಿದ್ದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸೈಕಲ್ ನೀಡಿಲ್ಲ ಕಾಂಗ್ರೆಸ್ಸಿನೊಂದಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಾಲಮನ್ನಾ ಮಾಡಕು ಕಾಂಗ್ರೆಸ್ ನ ಅಡ್ಲಚಣೆಯ ನಡುವೆ ಕೇವಲ 14 ತಿಂಗಳಲ್ಲಿ 25 ಸಾವಿರ ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಿರುವೆ

ಇನ್ನೂ 2 ಲಕ್ಷ ರೈತರ ಸಾಲಮನ್ನಾ ಆಗಬೇಕಿದೆ ನಾನು ಅಧಿಕಾರಕ್ಕೆ ಬಂದ್ರೆ ಸಾಲಮನ್ನಾ ಮಾಡುವೆ

ಕುಷ್ಟಗಿ ತಾಲೂಕಿನಲ್ಲಿ 16 ಸಾವಿರ ರೈತರಿಗೆ ಸಾಲಮನ್ನಾ ಲಾಭ ಪಡೆದಿದ್ದಾರೆ

ಈ 16 ಸಾವಿರ ರೈತರ ಕುಟುಂಬ ಮನಸ್ಸು ಮಾಡಿ ತುಕರಾಮ್ ಅವರಿಗೆ ಮತ ನೀಡುವಂತೆ ಮನವಿ

ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಸರ್ಕಾರ ಉಚಿತವಾಗಿ ಎಕರೆಗೆ ಹತ್ತು ಸಾವಿರದಂತೆ ಹತ್ತು ಎಕರೆಗೆವರೆಗೆ ಒಂದು ಲಕ್ಷ ರೂಪಾಯಿ ಕೊಡುವ ಯೋಜನೆ

ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಹಾಗೂ ಆದಾಯ ಇಲ್ಲದ ಮಹಿಳೆಯರಿಗೆ ತರಬೇತಿ ನೀಡಿ ತಿಂಗಳಿಗೆ ಹದಿನೈದು ಸಾವಿರ ಬರುವಂತೆ ಸರ್ಕಾರದಿಂದ ವ್ಯವಸ್ಥೆ ಮಾಡುವೆ ನನ್ನನ್ನೊಮ್ಮೆ ಪರೀಕ್ಷೆ ಮಾಡಿ.ರೈತರಿಗೆ 24 ಗಂಟೆ ಉಚಿತವಾಗಿ ವಿದ್ಯುತ್ ಪೂರೈಸುವ ಯೋಜನೆ ರೂಪಿಸಿದ್ದೇನೆ

ಜೆಡಿಎಸ್ ಗೆ ಬಹುಮತದೊಂದಿಗೆ ಸರ್ಕಾರ ಬಂದ್ರೆ ಈ ಐದು ಯೋಜನೆಗಳನ್ನ ಜಾರಿಗೆ ತರದಿದ್ದರೆ ಪಕ್ಷ ವಿಸರ್ಜನೆ ಮಾಡುವೆ

ಪಕ್ಷ ಸಂಘಟನೆಯ ಶಕ್ತಿ ಇರುವಂತ ಹಣ ಇಲ್ಲದಿದ್ದರೂ ಯಾವುದೇ ಯುವಕರು ಮುಂದೆ ಬಂದರೆ ನಿಮಗೆ ಅವಕಾಶ ನೀಡುವೆ. ರೈತರಿಗೆ 24 ಗಂಟೆ ಉಚಿತವಾಗಿ ವಿದ್ಯುತ್ ಪೂರೈಸುವ ಯೋಜನೆ ರೂಪಿಸಿದ್ದೇನೆ

ಜೆಡಿಎಸ್ ಗೆ ಬಹುಮತದೊಂದಿಗೆ ಸರ್ಕಾರ ಬಂದ್ರೆ ಈ ಐದು ಯೋಜನೆಗಳನ್ನ ಜಾರಿಗೆ ತರದಿದ್ದರೆ ಪಕ್ಷ ವಿಸರ್ಜನೆ ಮಾಡುವೆ

ಪಕ್ಷ ಸಂಘಟನೆಯ ಶಕ್ತಿ ಇರುವಂತ ಹಣ ಇಲ್ಲದಿದ್ದರೂ ಯಾವುದೇ ಯುವಕರು ಮುಂದೆ ಬಂದರೆ ನಿಮಗೆ ಅವಕಾಶ ನೀಡುವೆ
[ನಾನೇನು ತಪ್ಪು ಮಾಡಿದ್ದೇನೆ ನನಗ್ಯಾಕೆ ಬಹುಮತ ನೀಡುತ್ತಿಲ್ಲ

ನಾನೇಷ್ಟು ದಿನ ಬದುಕುವೆ ಗೊತ್ತಿಲ್ಲ

ಬಡಜನರ ಸಂಕಷ್ಡ ಪರಿಹರಿಸಬೇಕೆಂಬ ಉದ್ದೇಶವಿದೆ

ಒಂಬತ್ತು‌ ಕೋಟಿ ವೆಚ್ಚದಲ್ಲಿ ಮಡಿಕೇರಿಯಲ್ಲಿ ಗುಡ್ಡ ಕುಸಿತದಿಂದ ನಾಶವಾಗಿದ್ದ ಮನೆ ನಿರ್ಮಿಸಿ ಕೊಟ್ಟಿದ್ದೇನೆ

ಮನೆ ನಿರ್ಮಾಣ, ನೀರಾವರಿಗಾಗಿ, ಉತ್ತಮ ಶಿಕ್ಷಣಕ್ಕಾಗಿ, ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ, ಹೈಟೆಕ್ ಆಸ್ಪತ್ರೆಗಾಗಿ, ವಯೋ ವೃದ್ದರ ನೆಮ್ಮದಿಗಾಗಿ, ರೈತರ ಕಲ್ಯಾಣಕ್ಕಾಗಿ ಒಂದು ಬಾರಿ ನಮಗೆ ಸ್ವತಂತ್ರ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ

Please follow and like us: