ಗಂಗಾವತಿ ತಾಲೂಕಿನ ಕಾರ್ ಮೆಕ್ಯಾನಿಕ್‌ಗಳು ಎ.ಟಿ.ಡಬ್ಲ್ಯೂ.ಎಫ್ ಸೇರಿಕೆ: ಸ್ವಾಗತ- ಭಾರಧ್ವಾಜ್


ಗಂಗಾವತಿ: ತಾಲೂಕಿನ ಸಣ್ಣ ಯಂತ್ರ ಹಾಗೂ ಕಾರ್ ಮೆಕ್ಯಾನಿಕ್‌ಗಳು ಇಂದು ರಾಯಚೂರು ರಸ್ತೆಯಲ್ಲಿರುವ ಆಟೋನಗರದ ಕ್ರಾಂತಿಕೇಂದ್ರದಲ್ಲಿ ನಡೆದ ಸಭೆಯಲ್ಲಿ ೪೬ ಜನ ಎ.ಟಿ.ಡಬ್ಲ್ಯೂ.ಎಫ್ ಸೇರಿದ್ದಾರೆಂದು ಎ.ಟಿ.ಡಬ್ಲ್ಯೂ.ಎಫ್‌ನ ಗೌರವಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳು, ಪೌರಕಾರ್ಮಿಕರು ಸುಮರು ೧೦೦ ಜನ ಹಾಜರಿದ್ದರು. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗಳ ಬಗ್ಗೆ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಆಂಜನೇಯರವರು ಕಾರ್ಮಿಕರಿಗೆ ತಿಳಿಸಿದರು. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಲಿಸಿ ಪರಿಹಾರ ಹಾಗೂ ಮಾರ್ಗದರ್ಶನ ಮಾಡಿದರು.
ಕಾರ್ ಮೆಕ್ಯಾನಿಕ್‌ಗಳ ಸಮಿತಿ ತಾಲೂಕಿನ ಕಾರ್ ರಿಪೇರಿ ದರದ ಪಟ್ಟಿಯನ್ನು ಎಲ್ಲಾ ಸದಸ್ಯರಿಗೆ ನೀಡಿ ಅದರಂತೆ ದುಡ್ಡು ತೆಗೆದುಕೊಳ್ಳಲು ಹಾಗೂ ದರದಲ್ಲಿ ಯಾವುದೇ ತಾರತಮ್ಯ ಮಾಡಬಾರದೆಂದು ತೀರ್ಮಾನಿಸಿತು.
ಈ ಸಂದರ್ಭದಲ್ಲಿ ಎ.ಟಿ.ಡಬ್ಲ್ಯೂ.ಎಫ್ ಜಿಲ್ಲಾಧ್ಯಕ್ಷರಾದ ಡಿ. ವಿಜಯ, ಕಾರ್ಯದರ್ಶಿಯಾದ ಭಾಷು ಲಾರಿಮೆಕ್ಯಾನಿಕ್, ಖಜಾಂಚಿಯಾದ ವಾಸೀಮ್, ಮುಖಂಡರಾದ ಕಟ್ಟಾ ರಾಜ, ಕಾರ್ ಮೆಕ್ಯಾನಿಕ್‌ಗಳ ಮುಖಂಡರಾದ ಕೈಸರ್, ರವಿ ಬೋಸ್ಲೆ, ರಿಯಾಜ್, ಶಿವಾನಂದ, ಮನ್ಸೂರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Please follow and like us: