ಭಾರತಿಯ ಅಂಚೆ ಇಲಾಖೆಯು ರೇಲ್ವೆ ಇಲಾಖೆ ಸಹಾಯದೊಂದಿಗೆ, ಗಂಗಾರತಿ ಮುಖ್ಯ ಅಂಚೆ ಕಚೇರಿಯಲ್ಲಿ ರೈಲ್ವೇ ರಿಜರ್ವೇಶನ್ ಟಿಕೇಟ್ ಬುಕ್ಕಿಂಗ್ ಹಾಗೂ ತತ್ಕಾಲ್ ಟಿಕೇಟ್ ಬುಕಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಗದಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಚಿದಾನಂದ ಪದ್ಮಶಾಲಿಯವರು ತಿಳಿಸಿದ್ದಾರೆ.
ಗಂಗಾವತಿ ಮುಖ್ಯ ಅಂಚೆ ಕಚೇರಿಯಲ್ಲಿ ರೈಲ್ವೇ ರಿಜರ್ವೇಶನ್ ಟಿಕೇಟ್ ಬುಕ್ಕಿಂಗ್ ಹಾಗೂ ತತ್ಕಾಲ್ ಟಿಕೇಟ್ ಬುಕಿಂಗ್ ಸೌಲಭ್ಯವಿದ್ದು, ಈ ರೇಲ್ವೆ ಟಿಕೇಟ್ ಬುಕ್ಕಿಂಗ್ ಕೌಂಟರ್ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಚೇರಿಯ ಎಲ್ಲಾ ಕೆಲಸದ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರದವರೆಗೆ) ಮತ್ತು ಪ್ರತೀ ಶನಿವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರುತ್ತದೆ. ಗಂಗಾವತಿ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಹಕರು ರೈಲ್ವೇ ರಿಜರ್ವೇಶನ್, ತತ್ಕಾಲ್ ಟಿಕೇಟ್ ಬುಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ಮುಖ್ಯ ಅಂಚೆ ಕಚೇರಿಯನ್ನು ಭೇಟಿ ಮಾಡಬಹುದಾಗಿದೆ

Please follow and like us: