ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ದಿಗೆ ಬದ್ದ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ : 28 ಹಿರೇಸಿಂದೋಗಿ ಹಾಗೂ ಕಂಪ್ಲಿ ಕ್ರಾಸ್ ಬಳಿ 9.95 ಕೋಟಿ ವೆಚ್ಚದ ಕಲ್ಮಲಾ – ಶಿಗ್ಗಾಂವ ರಸ್ತೆಯ ಕಾಮಗಾರಿಗೆ ಭೂಮಿಪೂಜೆಯನ್ನ ಮಾನ್ಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಈ ರಸ್ತೆಯ ಅಭಿವೃದ್ದಿ ಬಹುದಿನಗಳ ಕನಸಾಗಿತ್ತು.ಈ ರಸ್ತೆಯ ಅಭಿವೃದ್ದಿ ವಿಶೇಷವಾದ ಒತ್ತನ್ನ ನೀಡಿ 9.95 ಕೋಟಿ  ಮಂಜೂರು ಮಾಡಿಸಿ ಹಿರೇಸಿಂದೋಗಿಯಿಂದ ಕಂಪ್ಲಿ ಕ್ರಾಸ್ ವರೆಗೆ ಸುಮಾರು 10 ಕಿ.ಮೀ ಡಾಂಬರೀಣ ರಸ್ತೆ ನಿರ್ಮಾಣ ಆಗಲಿದೆ. ಬೆಳಗಟ್ಟಿ ಗ್ರಾಮದವರೆಗೆ ರಸ್ತೆ ನಿರ್ಮಾಣವಾಗಬೇಕಾಗಿದ್ದು 9.95 ಕೋಟಿ ಅನುಧಾನದಲ್ಲಿ 10 ಕಿ.ಮೀ ನಷ್ಟು ಕಾಮಗಾರಿ ಆಗುವುದರಿಂದ ಕ್ರಾಸ್ ವರೆಗೆ ಸುಮಾರು 10 ಕಿ.ಮೀ ಡಾಂಬರೀಣ ರಸ್ತೆ ನಿರ್ಮಾಣ ಆಗಲಿದೆ. ಕಂಪ್ಲಿ ಕ್ರಾಸ್ ನಿಂದ ಬೆಳಗಟ್ಟಿ ವರೆಗಿನ ರಸ್ತೆ ಅಭಿವೃದ್ದಿ ಕಾಮಗಾರಿಗೆ ಈಗಾಗಲೇ  ಪ್ರಸ್ಥಾವನೆಯನ್ನ ಸಲ್ಲಿಸಲಾಗಿದೆ ಎಂದರು.  ನಾಳೇಯಿಂದಲೇ ಕಾಮಗಾರಿಯನ್ನ ಪ್ರಾರಂಭ ಮಾಡುವಂತೆ ಈಗಾಗಲೇ ಎಜೆನ್ಸಿ ಅವರಿಗೆ ತಿಳಿಸಿದ್ದೇನೆ.ಈ ಭಾಗದ ಮುಖಂಡರು ಮುಂದೆ ನಿಂತು ಕಾಮಗಾರಿಯನ್ನ ಸುಸಜ್ಜಿತವಾಗಿ ಮಾಡಿಸಿಕೊಳ್ಳಿ ಎಂದರು.

 

ಈ ವೇಳೆ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ,ಮುಖಂಡರಾದ ಭರಮಪ್ಪ ಹಟ್ಟಿ,ಕೇಶವರೆಡ್ಡಿ ಮಾದಿನೂರು,ಮಾಜಿ ತಾಲೂಕು ಪಂಚಾಯತ ಸದಸ್ಯರಾದ ಬಾಲಚಂದ್ರನ ಮುನಿರಬಾದ್,ನಿಂಗಪ್ಪ ಯತ್ನಟ್ಟಿ,ಗುರುಬಸವರಾಜ ಹಳ್ಳಿಕೇರಿ,ಹ್ಯಾಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ತೋಟಪ್ಪ ಶಿಂಟ್ರ,ಅನ್ವರ ಗಡಾದ,ಮಹಾಂತೇಶ ಕವಲೂರು ವಕ್ತಾರ ಕುರಗೋಡ್ ರವಿ ಸೇರಿದಂತೆ ಇನ್ನಿತರ ಅನೇಕರು ಉಪಸ್ಥಿತ ಇದ್ದರು.

Please follow and like us: