ಸಂಸದ ಸಂಗಣ್ಣ ಕರಡಿ ಅವರಿಂದ ಕೊಪ್ಪಳ ರೈಲು ನಿಲ್ದಾಣದಲ್ಲಿ ಎಸ್ಕಲೇಟರಗಳ ಉದ್ಘಾಟನೆ

 ಕೊಪ್ಪಳ ಜಿಲ್ಲೆಯ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಬಹುದಿನಗಳ ಬೇಡಿಕೆಯಾದ ಕೊಪ್ಪಳ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯಕ್ಕೆ ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ನವೆಂಬರ್ 28ರಂದು ಚಾಲನೆ ನೀಡಿದರು.
ನಗರದ ರೈಲ್ವೆ ಆವರಣದಲ್ಲಿ ನೈರುತ್ಯ ರೈಲ್ವೆದಿಂದ ಆಯೋಜಿಸಿದ್ದ ಎಸ್ಕಲೇಟರಗಳ ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಂಸದರು, ಕೊಪ್ಪಳ ರೈಲು ನಿಲ್ದಾಣವು ನಾನ್ ಸಬ್ ಅರ್ಬನ್ ಗ್ರೂಪ್ 5ರ ವರ್ಗದ ನಿಲ್ದಾಣವಾಗಿದೆ. ಪ್ರತಿ ದಿನ ಈ ನಿಲ್ದಾಣಕ್ಕೆ ಅಂದಾಜು 5000 ಜನರು ಬಂದು ಹೋಗುತ್ತಾರೆ. ಸಾರ್ವಜನಿಕರ ಒತ್ತಾಸೆಯಂತೆ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಕೊಪ್ಪಳ ನಿಲ್ದಾಣದಲ್ಲಿ 2.32 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಎಸ್ಕಲೇಟರಗಳನ್ನು ಅಳವಡಿಸಿದೆ ಎಂದು ತಿಳಿಸಿದರು.
ಇಂಧನ ದಕ್ಷತೆಯ ಸ್ಟಾರ್ ಮಾನ್ಯತೆಯನ್ನು ಹೊಂದಿರುವ ಈ ಎಸ್ಕೆಲೇಟರಗಳನ್ನು ಪ್ಲಾಟ ಫಾರ್ಮ ಸಂಖ್ಯೆ 1 ಮತ್ತು ಪ್ಲಾಟವಪಾರ್ಮ ಸಂಖ್ಯೆ 2ರಲ್ಲಿ ಅಳವಡಿಸಲಾಗಿದೆ. ಇವು ಅಂತಾರಾಷ್ಟಿçÃಯ ಮಾನದಂಡಕ್ಕೆ ಅನುಗುಣವಾದ ಸುರಕ್ಷತಾ ಅಂಶಗಳನ್ನು ಒಳಗೊಂಡಿವೆ. ಈ ಎಸ್ಕಲೇಟರಗಳಿಂದ ಹಿರಿಯ ನಾಗರಿಕರು, ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರು ಮತ್ತು ದಿವ್ಯಾಂಗ ಜನರಿಗೆ ಒಂದು ಪ್ಲಾಟಪಾರ್ಮನಿಂದ ಮತ್ತೊಂದು ಪ್ಲಾಟಪಾರ್ಮಗೆ ತೆರಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ವೇಳೆ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯು ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಜಿಲ್ಲೆಯ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಮಾತನಾಡಿ, ಜನತೆಗೆ ಮೂಲ ಸೌಕರ್ಯ ಒದಗಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೂಲಭೂತ ಕರ್ತವ್ಯವಾಗಿದೆ. ಗದಗ ವಾಡಿ ರೈಲು ಹಳಿ ಜೋಡಣೆ ಕಾರ್ಯ ಇನ್ನೂ ತೀವ್ರಗತಿಯಲ್ಲಿ ನಡೆಯಬೇಕು. ಕುಷ್ಟಗಿಯಿಂದ ಮುಂದಿನ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯ ಕೂಡ ವೇಗವಾಗಿ ನಡೆಯುವಂತಾಗಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಕಳೆದ 5 ವರ್ಷದಲ್ಲಿ ಹತ್ತು ಹಲವಾರು ಯೋಜನೆಗಳು ಹರಿವ ನೀರಿನಂತೆ ಅನುಷ್ಠಾನವಾಗುತ್ತಿವೆ. ಜನರೆ ಅಪೇಕ್ಷೆಯಂತೆ ಸಂಸದರು ಹುಲಗಿ ಕ್ಷೇತ್ರದಲ್ಲಿ ಸಹ ಉತ್ತಮ ದರ್ಜೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ಕಾರ್ಯಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಸಿನೀಯರ್ ಡಿಪಿಓ ಆಸೀಫ್ ಹಪೀಜ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಎಸ್ಕಲೇಟರಗಳು ಮೇಲಕ್ಕೆ ಹಾಗೂ ಕೆಳಕ್ಕೆ ಎರಡು ದಿಕ್ಕಿನಲ್ಲಿ ಚಲಿಸಬಲ್ಲದಾಗಿದ್ದು ಸುರಕ್ಷಿತವಾಗಿವೆ. ಸರಾಗವಾಗಿ ಹಾಗೂ ಸತತವಾಗಿ ಕಾರ್ಯನಿರ್ವಹಿಸುವ ಸಾರ‍್ಥö್ಯ ಹೊಂದಿವೆ. ಪ್ರತಿಯೊಂದು ಎಸ್ಕಲೇಟರ್ ಪ್ರತಿ ನಿಮಿಷಕ್ಕೆ 100 ಜನ ಪ್ರಯಾಣಿಕರನ್ನು ಹೊರುವ ಸಾರ‍್ಥö್ಯ ಹೊಂದಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ನೈರುತ್ಯ ರೈಲ್ವೆದ ಹುಬ್ಬಳ್ಳಿ ವಿಭಾಗದ ಸಿನಿಯರ್ ಡಿಸಿಎಂ ಹರಿಯಿತಾ, ಸಂಸದರ ಆಪ್ತ ಸಹಾಯಕರು ಶ್ರೀನಿವಾಸ ಜೋಶಿ, ನಗರಸಭೆ ಸದಸ್ಯರು ಮತ್ತು ಇತರರು ಇದ್ದರು.
Please follow and like us: