ಗ್ರಾಮೀಣ ಠಾಣೆ ಸಿಪಿಐ ವಿಶ್ವನಾಥ ಹಿರೇಗೌಡರ್ ಸ್ಥಾನಕ್ಕೆ ಮಹಾಂತೇಶ್ ಸಜ್ಜನ್ ವರ್ಗ

ಕೊಪ್ಪಳ : ಗ್ರಾಮೀಣ ಠಾಣೆ ಸಿಪಿಐ ವಿಶ್ವನಾಥ ಹಿರೇಗೌಡರರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಅವರ ಸ್ಥಾನಕ್ಕೆ ಮಹಾಂತೇಶ್ ಸಜ್ಜನ್ ರನ್ನು ವರ್ಗಾವಣೆ ಮಾಡಲಾಗಿದೆ. ಸಿಪಿಐ ವಿಶ್ವನಾಥ ಹಿರೇಗೌಡರರನ್ನು ಗದಗಿನ ಸೆನ್ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಮಹಾಂತೇಶ್ ಸಜ್ಜನರನ್ನು ಈಗ ಕೊಪ್ಪಳ ಗ್ರಾಮೀಣ ಠಾಣೆಗೆ ವರ್ಗ ಮಾಡಲಾಗಿದೆ. ಸಿದ್ರಾಮಯ್ಯ ಬಿ.ಎಂ ಇವರನ್ನು ಕಾರಟಗಿ ಹಾಗೂ ಜಗದೀಶ ಕೆ.ಜೆ ಇವರನ್ನು ಕನಕಗಿರಿಯ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

Please follow and like us: