ಮಹರ್ಷಿ ವಾಲ್ಮಿಕಿಯವರ ಆದರ್ಶ ಬದುಕು ನಮಗೆಲ್ಲಾ ಪ್ರೇರಣೆಯಾಗಲಿ- ಸಿ ವಿ ಚಂದ್ರಶೇಖರ

ಕೊಪ್ಪಳ :  ಇಂದು ನಮಗೆಲ್ಲಾ ಶುಭದಿನ. ಹೊಸ ಘಳಿಗೆ. ನವ ಮನ್ವಂತರ. ಈ ಘಳಿಗೆಗೆ ತಿಗರ ಗ್ರಾಮ ಸಾಕ್ಷಿಯಾಗುತ್ತಿರುವುದು ಸುದೈವ. ಒಂದೆಡೆ ಮಹರ್ಷಿ ವಾಲ್ಮಿಕಿಯವರ ಮೂರ್ತಿ ಪ್ರತಿಷ್ಠಾನೆ. ಇನ್ನೊಂದೆಡೆ ಸಾಮೂಹಿಕ ವಿವಾಹಗಳು. ದೈವಿಕ ಹಾಗೂ ಸಮಾಜಿಕ ಶಕ್ತಿಗಳ ಸಮ್ಮಿಲನ. ತಿಗರಿ ಗ್ರಾಮಸ್ಥರು ಅದೃಷ್ಟವಂತರು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಪಕ್ಷದ ಮುಖಂಡರಾದ   ಸಿ ವಿ ಚಂದ್ರಶೇಖರ  ಹೇಳಿದರು. ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮಿಕಿ ಮೂರ್ತಿ ಪ್ರತಿಷ್ಟಾಪನೆ ಮತ್ತು ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು

 

ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದವರು ಮಹರ್ಷಿ ವಾಲ್ಮೀಕಿ. ವಾಲ್ಮೀಕಿ ರಾಮಾಯಣವನ್ನು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಆದಿಕವಿ ಎಂದು ಕರೆಯಲಾಯಿತು. ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು 24,000 ಶ್ಲೋಕಗಳನ್ನು ಹೊಂದಿದೆ.   ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ರಾಮಾಯಣ ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಮಹರ್ಷಿ ವಾಲ್ಮೀಕಿ ಅವರ ಮೇಲೆ ಎಲ್ಲಾ ದೇವರು ಮತ್ತು ದೇವತೆಗಳು ತಮ್ಮ ಅನುಗ್ರಹವನ್ನು ನೀಡಿದ್ದಾರೆ ಎನ್ನುವ ನಂಬಿಕೆಯಿದೆ. ಮಹರ್ಷಿ ವಾಲ್ಮೀಕಿಯು ಭಗವಾನ್‌ ರಾಮನಿಗೂ ಒಮ್ಮೆ ತಮ್ಮ ಸಹಾಯಹಸ್ತವನ್ನು ಚಾಚಿದ್ದರು. ಜಾನಪದ ನಂಬಿಕೆಗಳ ಪ್ರಕಾರ, ಮಹರ್ಷಿ ವಾಲ್ಮೀಕಿ ಮುಂದಿನ ಜೀವನದಲ್ಲಿ ತುಳಸಿದಾಸರಾಗಿ ಜನಿಸಿದರು ಮತ್ತು ರಾಮಾಯಣದಿಂದ ರಾಮಚಾರಿತ ಮಾನಸವನ್ನು ರಚಿಸಿದರು ಎನ್ನಲಾಗುತ್ತದೆ. ಅಂತಹ ಮಹರ್ಷಿ ವಾಲ್ಮಿಕಿಯವರ ಮೂರ್ತಿ ಪ್ರತಿಷ್ಠಾನೆಯಾಗಿದೆ. ಅವರ ಆದರ್ಶ ಬದುಕು ನಮಗೆಲ್ಲಾ ಪ್ರೇರಣೆಯಾಗಲಿ. ನಮ್ಮನ್ನು ಮುನ್ನಡೆಸಲಿ. ಅವರ ಆಶೀರ್ವಾದ ನಮ ವಧು-ವರರ ಮೇಲೆಯಿರಲಿ. ಎಸ್‍ಟಿ ಸಮುದಾಯ ಶತ ಶತಮಾನಗಳಿಂದಲೂ ತುಳಿತಕ್ಕೊಳಗಾದ ಸಮುದಾಯ. ಅವರದ್ದು ಪರಿಶ್ರಮದ ಬದುಕು. ದೇಶ ಕಟ್ಟಲು, ಸಮಾಜ ಮುನ್ನಡೆಸಲು ಆ ಸಮುದಾಯದವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಮಹರ್ಷಿ ವಾಲ್ಮಿಕಿಯವರು ತೋರಿದ ಹಾದಿಯಲ್ಲಿ ಸಾಗಿದವರು. ಸಾಗುತ್ತಿರುವವರು. ಸಮುದಾಯದ ಅಭಿವೃದ್ದಿಯನ್ನು ಗಮನಿಸಿದ ನಮ್ಮ ಸರಕಾರಗಳು, ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರು,   ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿಯವರು ಹಾಗೂ ನಮ್ಮೆಲರ ಧೀಮಂತ ನಾಯಕರಾದ   ಬಿ ಎಸ್ ಯಡಿಯೂರಪ್ಪನವರ ದಿಟ್ಟ ನಿರ್ಧಾರಗಳಿಂದ, ಇಂದು ಎಸ್‍ಟಿ ಸಮುದಾಯದ ಮೀಸಲಾತಿ ಶೇ 4 ರಿಂದ ಶೇ 7 ಕ್ಕೆ ಏರಿಕೆಯಾಗಿದೆ. ಇದು ಆ ಸಮಾಜದ ಉಜ್ವಲ ಭವಿಷ್ಯಕ್ಕೆ ಪೂರಕ. ನಮ್ಮೆಲ್ಲರ ಅಣ್ಣನವರಾದ ಬಡವರ ಬಂಧು ಸಚಿವರಾದ ಶ್ರೀರಾಮುಲು ಅವರ ಧೃಡ ನಿರ್ಧಾರವನ್ನು ನಾವೆಲ್ಲ ನೆನೆಯಲೇಬೇಕು. ಅವರ ನಾಯಕತ್ವವಿಲ್ಲದೇ ಇದ್ದರೇ, ಎಸ್ ಟಿ ಸಮುದಾಯ ಇನ್ನೂ ಕಷ್ಟದ ದಿನಗಳನ್ನು ನೋಡಬೇಕಿತ್ತು. ಹಾಗೆ ನೋಡಿದರೇ ಶ್ರೀರಾಮುಲು ಅವರು ಈ ಭಾಗದ ಹಾಗೂ ರಾಜ್ಯದ ಎಸ್ ಟಿ ಸಮುದಾಯಗಳಿಗೆ ಒಂದು ರೀತಿ ವಾಲ್ಮೀಕಿಯಿದ್ದಂತೆ. ನಾವೆಲ್ಲಾ ಸೇರಿ ಹೊಸದೊಂದು ನಾಡನ್ನು ಕಟ್ಟೋಣ. ಐತಿಹಾಸಿಕ ಈ ನಾಡಿನಲ್ಲಿ ಬದಲಾವಣೆ ಬರಲಿ. ಹೊಸತನವಿರಲಿ. ನವ ಮನ್ವಂತರದ ಅಭಿವೃದ್ಧಿಯ ಪರ್ವ ಆರಂಭವಾಗಲಿ. ಭಗವಂತ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ

 

Please follow and like us: