ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2023 ನಿಮಿತ್ಯ ಪ್ರತಿಭಾನ್ವೇಷಣೆ

ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-2023 ಜನವರಿ 8,9, ಹಾಗು 10 ರಂದು ಜರಗುವ ಕಾರ್ಯಕ್ರಮದಲ್ಲಿ ವಿಶಿಷ್ಟ ಪ್ರತಿಭೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಪ್ರತಿಭಾನ್ವಿತರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಜಾತ್ರಾಮಹೋತ್ಸವದ ಕೈಲಾಸ ಮಂಟಪ ವೇದಿಕೆಯಲ್ಲಿ 05 ರಿಂದ 10 ನಿಮಿಷ ಕಾಲವಧಿಯಲ್ಲಿ ಪ್ರಸ್ತುತ ಪಡಿಸಲು ಅವಕಾಶ ನೀಡಲಾಗುತ್ತದೆ.

ಹೀಗಾಗಿ ಹಾಡು, ವೈಯಕ್ತಿಕ ನೃತ್ಯ, ಗುಂಪು ನೃತ್ಯ, ಯೋಗ, ಸ್ಟಂಟ್, ಜಾದು, ಮಿಮಿಕ್ರಿ (ಪ್ರಾಣಿ ಪಕ್ಷಿಗಳ) ವಾದ್ಯಗಳು ಸೇರಿದಂತೆ ನಿಮ್ಮಲ್ಲಿರುವ ಪ್ರತಿಭೆಯ ಕುರಿತು ಮೂರು ನಿಮಿಷಗಳ ವಿಡಿಯೋವನ್ನು ತಮ್ಮ ಸ್ವವಿವರಗಳೊಂದಿಗೆ ಈ ವಾಟ್ಸಾಪ್‌ ನಂಬರ್‌ಗೆ: 8310070175 ಕಳುಹಿಸಿ ಕೊಡಬೇಕು.

ಹೆಸರು: ವಯಸ್ಸು:

ಮೊಬೈಲ್‌ ಸಂಖ್ಯೆ:

• ವಿಡಿಯೋ ಕಳುಹಿಸಿ ಕೊಡಲು ಕೊನೆಯ ದಿನಾಂಕ: 13/12/2022

• ವಯಸ್ಸಿನ ಮಿತಿ ಇಲ್ಲದಂತೆ ಬಾಲಕ, ಬಾಲಕಿಯರು, ಮಹಿಳೆಯರು, ಪುರುಷರು ಕಳುಹಿಸಿ ಕೊಡಬಹುದಾಗಿದೆ.

ಎಂದು ಆಡಳಿತಾಧಿಕಾರಿಗಳು ಶ್ರೀ ಗವಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us: