ಕೆಯುಡಬ್ಲುಜೆ ಪತ್ರಿಕಾ ಭವನದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ


ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾಭವನದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಸಂವಿಧಾನ ದಿನವನ್ನು ಆಚರಿಸಲಾಯಿತು. ಕೋಟೆ ಕದಂಬ ದಿನಪತ್ರಿಕೆಯ ಸಂಪಾದಕ ಎನ್.ಎಂ.ದೊಡ್ಡಮನಿ ಸಂವಿಧಾನದ ದಿನದ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಯಿತು. ಕಾರ್ಯಕ್ರಮದಲ್ಲಿ ಹರಿಶ್ ಎಚ್.ಎಸ್., ಸಿರಾಜ್ ಬಿಸರಳ್ಳಿ, ಶಿವಕುಮಾರ ಹಿರೇಮಠ, ಖಲೀಲ್ ಉಡೇವು, ಅಖಿಲ್ ಹುಡೇವು, ರಾಜೇಸಾಬ ತಾಳಕೇರಿ, ಹನುಮಂತ ಹಳ್ಳಿಕೇರಿ, ಸಿದ್ದು ಹಿರೇಮಠ, ಬ್ರಹ್ಮಾನಂದ, ಅಮಿತ್ ಕಂಪ್ಲೀಕರ್ , ಬಸವರಾಜ್ , ಮಂಜು ಕೋಳೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: