ಹಿರಿಯ ಸಾಹಿತಿ ಹೊನ್ಕಲ್ ರ ಸಾಹಿತ್ಯ ಕೃತಿಗಳ ಅವಲೋಕನ ಸಂಕಲನ “ಒಲಿದಂತೆ ಹಾಡಿರುವೆ”

ಕಲ್ಯಾಣ ಕರ್ನಾಟಕದ ಪ್ರದೇಶದ ಅಪರೂಪದ ಹಿರಿಯ ಸಾಹಿತಿ,ಕಥೆ, ಕವಿತೆ, ಲಲಿತ ಪ್ರಬಂಧ, ಪ್ರವಾಸ ಕಥನ, ಜೀವನ ಕಥನ, ಹಾಯ್ಕು, ಗಜಲ್ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಂಭ್ರದ್ಧ ಫಸಲು ತೆಗೆದು ಓದುಗರ ಮನ ಗೆದ್ದವರು ಸಿದ್ಧರಾಮ ಹೊನ್ಕಲ್ ಅವರು.
ಕಡಣಿಯ ಬೆರಗು ಪ್ರಕಾಶನವು ಹಿರಿಯ ಸಾಹಿತಿ ಹೊನ್ಕಲ್ ಅವರ ನೊರೂಂದು ಸಾಹಿತ್ಯ ಕೃತಿಗಳ ಅವಲೋಕನ ಸಂಕಲನ
ಒಲಿದಂತೆ ಹಾಡಿರುವೆ ಇತ್ತೀಚಿಗೆ ಪ್ರಕಟಿಸಿದೆ.
320 ರೂ ಮುಖಬೆಲೆ ಯ 328 ಪುಟಗಳ ಬೃಹತ್ ಅಪರೂಪದ ಸಂಕಲನವಿದು.  ಹುದ್ದೆಯಿಂದ ಸಮಾಜ ಶಾಸ್ತ್ರ ಬೋಧಕರಾಗಿ ಸೇವೆಯಿಂದ ನಿವೃತ್ತಿ ಹೊಂದಿದ್ದು ಪೃವೃತ್ತಿ ಯಿಂದ ಕನ್ನಡಮ್ಮನ ನುಡಿ ಪರಿಚಾರಕರಾಗಿ 51 ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲಮ ಪ್ರಭು ಪ್ರಕಾಶನದ ಜೊತೆ ಜೊತೆಗೆ ಹೊನ್ಕಲ್ ಸಾಹಿತ್ಯ ಹಾಗೂ ಸಂಸ್ಕೃತಿ ಕ ಪ್ರತಿಷ್ಠಾನ ದ ಮೂಲಕ ಹೊಸ ಪ್ರತಿಭಾವಂತ ಲೇಖಕರಿಗೆ ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸಿಕೊಡುವುದು ಅದರ ಉದ್ದೇಶ.
ಗಾಲೀಬ್, ಲಂಕೇಶ್ ಸುರಪುರ ದ ವೆಂಕಟಪ್ಪ ನಾಯಕ, ಸುರಪುರದ ರಾಣಿ ಈಶ್ವರಮ್ಮ, ಅಬ್ಬಾಸ್ ಮೇಲಿನಮನಿ, ಎಚ್ ಟಿ ಪೋತೆ, ನಾಲವಾರ್ ಕೋರಿ ಸಿದ್ದೇಶ್ವರ ಸ್ವಾಮೀಜಿ,ಆರ್ ಟಿ ವಿಠ್ಠಲ್ ಮೂರ್ತಿ, ಕಾಶೀನಾಥ್ ಅಂಬಲಗಿ, ಮೊಗಲ್ ಸಾಮ್ರಾಟ್ ಕೊನೆಯ ಬಾದಶಾಹ್ ಬಹಾದ್ದೂರ್ ಜಫರ್ ಮುಂತಾದವರ ಬದುಕು ಬರವಣಿಗೆ ದರ್ಶನವಾಗುತ್ತದೆ,.
ಗಜಲ್ ಸಾಹಿತ್ಯ ಹಾಯ್ಕು, ಸಾಹಿತ್ಯ, ಶಾಯರಿ ಕಥೆ ಕವಿತೆ ಕಾದಂಬರಿ ಹೀಗೆ ಅನೇಕ ಹಿರಿ ಕಿರಿಯ ಸಾಹಿತಿಗಳ ಕೃತಿಗಳು ಹೊನ್ಕಲ್ ಅವರ ಅವಲೋಕನ ಕ್ಕೆದಕ್ಕಿವೆ.
Siddarama Honnkal ಅವರ ಬರವಣಿಗೆ ಯಲ್ಲಿ ಹಿರಿಯರಿಗೆ ತಮಗೆ ಬೇಕಾದವರಿಗೆ ಹೊಗಳಿ ಹೊನ್ನ ಶೋಲಕ್ಕೆ ಏರಿಸುವ ಬೇಡವಾದರಿಗೆ ಹೊಸಕಿ ಹಾಕುವ ಅಥವಾ ಪೂರ್ವಗೃಹ ಪೀಡಿತರಾಗಿಯೋ ಹಳದಿ ಕನ್ನಡಕ ಕಣ್ಣಿಂದ ನೋಡುವ ಕ್ರಿಯೆ ಮಾಡಿಲ್ಲ
ಒಬ್ಬ ಅನುಭವಿ ಹಿರಿಯ ಬರಹ ಗಾರ ತಮಗೆ ಪ್ರಾಮಾಣಿಕವಾಗಿ ಓದಿಗೆದಕ್ಕಿದ್ದನ್ನು ನಿಷ್ಠೆ ಯಿಂದ ಬರೆದು ಪ್ರೋತ್ಸಾಹಿಸಿದ ರೀತಿಗೆ ಬೆರಗಾಗಿದ್ದೇನೆ.
ಸಂಕಲನ ದ ಶೀರ್ಷಿಕೆ ಸೂಚಿಸುವಂತೆ
ಒಲಿದಂತೆ ಹಾಡಿದ್ದು ಸತ್ಯ,.
ಒಳಿತಿಗಾಗಿ ತುಡಿದಿದ್ದು ಸತ್ಯ. ಹರಿತವಾದ ಸಾಣಿ ಹಿಡಿದುಕೊಂಡು ಹಿಗ್ಗಾ ಮುಗ್ಗಿ ಬರೆದಿಲ್ಲ, ಜಡ ವಿಮರ್ಶೆ ಪರಿಭಾಷೆ ದೂರಿಕರಿಸಿ ನೊರೊಂದು ಕೃತಿಗಳನ್ನು ಓದುವಂತೆ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ತಮಗೆ ಸಿಕ್ಕ ಪುಸ್ತಕ ಗಳನ್ನು ಪ್ರಾಮಾಣಿಕ ವಾಗಿ ಓದಿ,ಲೇಖಕರಿಗೆ ತಿಳಿಸಿ,ಮತ್ತೊಬ್ಬರು ಓದುವಂತೆ ಪ್ರೇರಣೆ ನೀಡಲು ತುಡಿಯುವ ಸಿದ್ಧಾರಾಮ ಸರ್ ಅವರ ವಿಶಾಲ ಹೃದಯಕ್ಕೆ ಸಲಾಂ ಹೇಳಲೇ ಬೇಕು,
ಖಾಲಿ ಕೋಣೆಯ ಹುಡುಗ ನ,
ಮೌನ ಮಾತಿನಲ್ಲಿ,
ಚಿಮಣಿ ಬೆಳಕಲ್ಲಿ ನಕ್ಷತ್ರ ಹುಡುಕಿ
ಭೀಮಾ ತೀರದ ಕಂಪು
ಗರೀಬನ ಜೋಳಿಗೆ ಯಿಂದ ತೆಗೆದು
ಅಮೃತ ಸಿಂಚನ ಉಣಬಡಿಸುವ ಪರಿಗೆ ನಾನು ಬೆರಗಾಗಿದ್ದೇನೆ
ಆತ್ಮ ಧ್ಯಾನ ದಲಿ
ಬೆಳ್ಳಕ್ಕಿ ಸಾಲುಗಳಲ್ಲಿ
ಮಡಿಲ ಮುತ್ತುಗಳನ್ನು ಹುಡುಕುವ ಕೂತಹಲಕ್ಕೆ ಶಬ್ಬಾಸ್ ಹೇಳಲೇ ಬೇಕು
ಮೂರನೇ ಕಣ್ಣಲ್ಲೂ ನಿಜ ದರ್ಶನ ವಿದೆ  ಬಯಲಲಿ ಬಯಲಾಗಲು ಕರೆವ ಕರೆ ಆಲಿಸಬೇಕಿದೆ, ಅಕ್ಕಡಿಸಾಲಲ್ಲಿ ಹೆಜ್ಜೆ ಹಾಕಿ ಅಂತರಂಗ ಮೃದಂಗ ಮೀಟಿ ಈ ಬದುಕು ನಿನಗಾಗಿಎಂದು ಉಸುರುವ ಅಲೆಮಾರಿ ಅವಧುತನಿಗೆ  ಸಾರಸ್ವತಲೋಕ ಅಭಾರಿ ಹೇಳಬೇಕಿದೆ
-A S Makanadar https://www.facebook.com/makandara
Please follow and like us: