ಸಾಹಿತ್ಯ ರಚನೆ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿ-  ಡಾ.ಗಣಪತಿ ಲಮಾಣಿ ಕರೆ

ಸಮಾಜದ ನ್ಯೂನ್ಯತೆಗಳನ್ನು, ಓರೆ ಕೋರೆಯನ್ನು ಉತ್ತಮ ಸಾಹಿತ್ಯ ರಚನೆ ಮಾಡುವ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿ ಎಂದು ಡಾ.ಗಣಪತಿ ಲಮಾಣಿ ಕರೆ ನೀಡಿದರು.
      ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಉಪನ್ಯಾಸ, ಯುವ ಮಹಿಳಾ ಕವಿಗೋಷ್ಠಿ, ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮಾಜ ಹಲವು ಹತ್ತು ವಿಚಾರಗಳಲ್ಲಿ ಸಾಗುವಾಗ ಲೋಪ ದೋಷಗಳನ್ನು ಅನುಭವಿಸುತ್ತಾ ಸಾಗುವಾಗ ಉತ್ತಮ ಸಾಹಿತ್ಯ ರಚನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಿ ಎಂದು ಯುವ ಕವಯತ್ರಿಯರಿಗೆ ಕಿವಿ ಮಾತು ಹೇಳಿದರು.
  ಕನ್ನಡ ನಾಡಿಗೆ ತಿರುಳ್ಗನ್ನಡ ನಾಡಿನ ಸಾಹಿತಿಗಳ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯಕ್ಕೆ ತಿರುಳ್ಗನ್ನಡ ನಾಡಿನ ಕೊಡುಗೆ ಎನ್ನುವ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ನಿಂಗಪ್ಪ ಕಂಬಳಿ ಅವರು ಅಭಿಪ್ರಾಯಪಟ್ಟರು.
    ಕವಿಗಳು ನಾಡಿನ ಸಂಸ್ಕೃತಿಯನ್ನು ಸಾಹಿತ್ಯ ರಚನೆ ಮಾಡುವ ಮೂಲಕ ಶ್ರೀಮಂತಗೊಳಿಸುತ್ತಾರೆ , ಸಾಹಿತ್ಯ ಭಾವನೆಗಳ ಬಂಢಾರ ಎಂದು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಕವಯಿತ್ರಿ ಪುಷ್ಪಲತಾ ಏಳುಬಾವಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
     ಕವಿಗೋಷ್ಠಿಯಲ್ಲಿ ಸುಮಾರು 20ಜನ ಯುವ ಕವಯಿತ್ರಿಯರು ತಮ್ಮ ಸ್ವ ರಚಿತ ಕವನ ವಾಚನ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೋಲೀಸ್ ಪಾಟೀಲ ಅವರು ಮಾತನಾಡಿ ಯುವ ಸಮುದಾಯ ಕಸಾಪ ಸದಸ್ಯತ್ವ ಪಡೆಯುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿ ಎಂದು ಕರೆ ನೀಡಿದರು.
  ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಂಕ್ರಪ್ಪ ಹೊರಪೇಟೆ ಮೋರನಾಳ,  ಸಣ್ಣ ರಂಗಪ್ಪ ಚಿತ್ರಗಾರ ಕಿನ್ನಾಳ ಅವರನ್ನು, ನಮ್ಮ ಭಾಷೆ ನಮ್ಮ ಹೆಮ್ಮೆ ವಿಷಯ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
   ಕಾರ್ಯಕ್ರಮದಲ್ಲಿ ರಮೇಶ ಕುಲಕರ್ಣಿ, ಶೇಖರಗೌಡ ಪೋಲೀಸ್ ಪಾಟೀಲ ,ರಮೇಶ ತುಪ್ಪದ, ಅಶೋಕ ಕುಂಬಾರ, ಡಾ.ಹುಲಿಗೆಮ್ಮ ನಾಗನೂರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಹ್ಯಾಟಿ ನಿರೂಪಿಸಿದರೆ ಬಸವರಾಜ ಶಿರಗುಪ್ಪಿ ಶೆಟ್ಟರ್ ಸ್ವಾಗತಿಸಿದರು.
Please follow and like us: