ಭಾಗ್ಯನಗರ : ಸಿ.ಎ. ಸೈಟ್, ಪಾರ್ಕ್ ಜಾಗೆ ಸ್ವಚ್ಛಗೊಳಿಸಲು ಹಾಗೂ ಹದ್ದುಬಂದಿ ಮಾಡಲು ಸೂಚನೆ

ತಾಲ್ಲೂಕಿನ ಭಾಗ್ಯನಗರ ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲಾ ಲೇ ಔಟ್ ಮಾಲೀಕರು ತಮ್ಮ ಲೇಔಟ್‌ಗಳ ಸಿ.ಎ. ಸೈಟ್ ಮತ್ತು ಪಾರ್ಕ್ ಜಾಗೆಗಳನ್ನು ಸ್ವಚ್ಛಗೊಳಿಸಿ, ಅವುಗಳ ಹದ್ದುಬಂದಿಯನ್ನು ಮಾಡುವಂತೆ ಸೂಚಿಸಲಾಗಿದೆ.
ಭಾಗ್ಯನಗರ ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲಾ ಲೇಔಟ್ ಮಾಲೀಕರು, ತಮ್ಮ ಲೇ ಔಟ್‌ಗಳಲ್ಲಿ ಈಗಾಗಲೇ ಸಿ.ಎ. ಸೈಟ್ ಮತ್ತು ಪಾರ್ಕ್ ಜಾಗೆಗಳನ್ನು ಬಿಟ್ಟು ಉಳಿದ ನಿವೇಶನಗಳನ್ನು ವ್ಯವಹಾರ ಮಾಡಿರುತ್ತೀರಿ. ಆದರೆ ಲೇಔಟ್‌ಗಳಲ್ಲಿ ಬಿಟ್ಟಿರುವ ಸಿ.ಎ. ಸೈಟ್ ಮತ್ತು ಪಾರ್ಕ್ ಜಾಗೆಗಳ ಕಾಳಜಿ ವಹಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಅಂದರೆ ಸಿ.ಎ. ಸೈಟ್ ಮತ್ತು ಪಾರ್ಕ್ ಜಾಗೆಗಳಲ್ಲಿ ಒತ್ತುವರಿ, ಕಸ ಕಡ್ಡಿ ಬೆಳೆಯುವುದು, ಫೆನ್ಸಿಂಗ್ ಮಾಡದೇ ಇರುವುದು ಗಮನಕ್ಕೆ ಬಂದಿರುತ್ತದೆ. ಇದರಿಂದ ಹಲವಾರು ಅನಾಮಧೇಯ ವ್ಯಕ್ತಿಗಳು ಅಲ್ಲಿ ಅತಿಕ್ರಮಣ, ಒತ್ತುವರಿ ಮಾಡುವಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಕಾರಣ ಭಾಗ್ಯನಗರ ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲಾ ಲೇ ಔಟ್ ಮಾಲೀಕರು 15 ದಿನಗಳೊಳಗಾಗಿ ತಮ್ಮ ಲೇ ಔಟ್ ನಲ್ಲಿ ಬಿಡಲಾಗಿರುವ ಸಿ.ಎ. ಸೈಟ್ ಮತ್ತು ಪಾರ್ಕ್ ಜಾಗೆಗಳನ್ನು ಸ್ವಚ್ಛಗೊಳಿಸಿ, ಅವುಗಳ ಹದ್ದುಬಂದಿಯನ್ನು ಮಾಡಿ, ಅವುಗಳಿಗೆ ಫೆನ್ಸಿಂಗ್ ಮಾಡಿ, ಭಾಗ್ಯನಗರ ಪಟ್ಟಣ ಪಂಚಾಯತಿಗೆ ವರದಿ ಮಾಡಲು ಕೋರಲಾಗಿದೆ ಎಂದು ಮುಖ್ಯಾಧಿಕಾರಿಗಳು ಮತ್ತು ಭಾಗ್ಯನಗರ ಪ.ಪಂ. ಆಡಳಿತಾಧಿಕಾರಿಗಳು ಆಗಿರುವ ಕೊಪ್ಪಳ ತಹಶೀಲ್ದಾರರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us: