ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಗೆ 4500 ಕೋಟಿ ಅನುಧಾನ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ :   ಗಿಣಗೇರಿ ಹಾಗೂ ಗೊಂಡಬಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹಳೇಕನಕಾಪುರ, ಕನಕಾಪುರ ತಾಂಡ, ಹೊಸಕನಕಾಪುರ, ಗಿಣಗೇರಿ, ಬಸಾಪುರ, ಕುಟುಗನಹಳ್ಳಿ, ಕಿಡದಾಳ ಹಾಗೂ ಬೆಳವಿನಾಳ ಗ್ರಾಮಗಳಲ್ಲಿ ಅಂದಾಜು ಮೊತ್ತ 1.50 ಕೋಟಿ ಅನುಧಾನದಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಉಧ್ಘಾಟನೆಯನ್ನ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ನೆರವೇರಿಸಿದರು.

ನಂತರ ಮಾತನಾಡಿದ ಅವರು ಕಳೆದ 9.5 ವರ್ಷಗಳಲ್ಲಿ 4500 ಸಾವಿರ ಕೋಟಿ ಅನುಧಾನವನ್ನ ತಂದು ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿ ಶ್ರಮಿಸಲಾಗಿದೆ ಎಂದರು. ಗಿಣಗೇರಿ ಗಿಣಿಗೇರಾ ಕೆರೆ 254 ಎಕರೆ ವಿಸ್ತೀರ್ಣ ಹೊಂದಿದ್ದು, ಪೂಜ್ಯ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗ‌ಳ ನೇತೃತ್ವದಲ್ಲಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಂಡ ಕಾರ್ಯ ಶ್ಲಾಘನೀಯವಾಗಿದ್ದು, ಮುಂದಿನ ಪೀಳಿಗೆಯು ಸ್ಮರಿಸುವಂತ ಇಂತಹ ಮಹತ್ಕಾರ್ಯದಲ್ಲಿ ಪಾಲ್ಗೊಂಡು ತನು-ಮನ-ಧನದಿಂದ ಸಹಕರಿಸಿದ ಎಲ್ಲರನ್ನೂ ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದರು.ಗಿಣಗೇರಿ ಕೆರೆಯ ಅಭಿವೃದ್ದಿಗೆ 3 ಕೋಟಿ ಅನುಧಾನವನ್ನ ಮಂಜೂರು ಮಾಡಿಸಿದ್ದು ಟೆಂಡರ್ ಕಾರ್ಯ ಪ್ರಕ್ರಿಯೆಯಲ್ಲಿದೆ.ಶೀಘ್ರದಲ್ಲಿ ಭೂಮಿಪೂಜೆಯನ್ನ ಮಾಡಿ ಕಾಮಗಾರಿಯನ್ನ ಪ್ರಾರಂಭ ಮಾಡಲಾಗುವದು ಎಂದರು.      ಪ್ರತಿ ಗ್ರಾಮಗಳಲ್ಲಿ ಜೆಜೆಯಮ್ ಯೋಜನೆಡಿಯಲ್ಲಿ ಪ್ರತಿ ಮನೆಗೂ ನಳ ಸಂಪರ್ಕ ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ.ಆದ್ದರಿಂದ ಪ್ರತಿ ಗ್ರಾಮಕ್ಕೂ ಶುದ್ದ ಕುಡಿಯುವ ನೀರನ್ನ ಒದಗಿಸುವ ಉದ್ದೇಶದಿಂದ ತುಂಗಭದ್ರ ನದಿಯ ಹಿನ್ನೀರನ್ನ ಉಪಯೋಗಿಸಿಕೊಂಡು ಕ್ಷೇತ್ರದ 103 ಗ್ರಾಮಗಳಿಗೂ ಶುದ್ದ ಕುಡಿಯುವ ನೀರನ್ನ ಒದಗಿಸುವ ಕಾಮಗಾರಿ ಇದಾಗಿದೆ. ಇದರ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರದಲ್ಲಿಯೇ ಭೂಮಿಪೂಜೆಯನ್ನ ಮಾಡಿ ಕಾಮಗಾರಿಯನ್ನ ಪ್ರಾರಂಭ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಿಗೇರಿ,ಗಿಣಗೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಣಣ್ಣ ಡೊಳ್ಳಿನ್,ಸುಬ್ಬಣ್ಣ  ಆಚಾರ್ ವಿದ್ಯಾನಗರ,ಪಂಪಣ್ಣ ಪೂಜಾರ,ಹನಮಂತಪ್ಪ ಜಲವರ್ಧನಿ,ಶಿವಶಂಕರ,ಗ್ಯಾನಪ್ಪ ಬಸಾಪುರ,ಆನಂದ ಕಿನ್ನಾಳ,ಶರಣಪ್ಪ ಕುಟುಗನಹಳ್ಳಿ,ನಿಂಗಪ್ಪ ಕುಟುಗನಹಳ್ಳಿ,ನಾಗರಾಜ ಕಿಡದಾಳ,ಮುದಿಯಪ್ಪ ಆದೋನಿ,ಭರಮಪ್ಪ ಗೋರವರ್,ಶೇಖರ್ ಇಂದಿರಗಿ ತಹಶೀಲ್ದಾರ್ ಅಮರೇಶ ಬಿರದಾರ್,ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡೇಶ ತುರಾದಿ ಸೇರಿದಂತೆ ಇನ್ನಿತರ ಅನೇಕರು ಉಪಸ್ಥಿತರಿದ್ದರು.

 

Please follow and like us: