ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ನಗರದ ಸತ್ಯಧ್ಯಾನಪುರ ಬಡಾವಣೆಯ ನಿವಾಸಿ 47 ವಯಸ್ಸಿನ ಮುರುಳೀಧರ್ ದೇಶಪಾಂಡೆ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ಕೊಪ್ಪಳ ನಗರ ಪೊಲೀಸ್ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ವಣಗೇರಿ ಗ್ರಾಮದ (ಹಾಲಿ ವಸ್ತಿ -ಸತ್ಯಧ್ಯಾನಪುರ ಬಡಾವಣೆ, ಕೊಪ್ಪಳ) ನಿವಾಸಿ ಮುರುಳೀಧರ್ ದೇಶಪಾಂಡೆ ತಂದೆ ಪ್ರಹ್ಲಾದ್ ರಾವ್ ದೇಶಪಾಂಡೆ ಎಂಬ ವ್ಯಕ್ತಿಯು 2021ರ ಡಿಸೆಂಬರ್ 20 ರಂದು ಬೆಳಿಗ್ಗೆ 08 ಗಂಟೆಯ ಸುಮಾರಿಗೆ ಕೊಪ್ಪಳ ನಗರದಲ್ಲಿರುವ ಬಾಡಿಗೆ ಮನೆಯಿಂದ ಊರಿಗೆ ಜಾತ್ರೆಗೆ ಹೋಗುತ್ತೇನೆಂದು ಹೇಳಿ ಹೋಗಿ ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಸಹೋದರ ಶಂಕರ್ ದೇಶಪಾಂಡೆ ಅವರು ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ವ್ಯಕ್ತಿಯು 5.3 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ, ಉದ್ದ ಮುಖ, ಅಗಲ ಹಣೆ ಹೊಂದಿದ್ದು, ಕಾಣೆಯಾದಾಗ ಟೀಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದ ಈ ವ್ಯಕ್ತಿಯು ಎಲ್ಲಿಯಾದರೂ ಕಂಡು ಬಂದಲ್ಲಿ ಅಥವಾ ಈತನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಮಾಹಿತಿಯನ್ನು ಕೊಪ್ಪಳ ಕಂಟ್ರೋಲ್ ರೂಂ.: 08539-230100 & 230222, ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮೊ.ಸಂ: 9480803745, ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಕಾ&ಸು) ಮೊ.ಸಂ: 9449484086 ಹಾಗೂ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08539-220333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Please follow and like us: