ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ

ಗಂಗಾವತಿ: ಇಂದು ದಿನಾಂಕ: ೦೧.೧೧.೨೦೨೨ ರಂದು ೬೭ನೇ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಗರದ ಕೊಪ್ಪಳ ರಸ್ತೆಯಲ್ಲಿರುವ ಭುವನೇಶ್ವರಿ ವೃತ್ತದ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು ಎಂದು ಕನ್ನಡಪರ ಸಂಘಟನೆಯ ಒಕ್ಕೂಟದ ಮುಖಂಡರಾದ ಅರ್ಜುನ ನಾಯಕ ಪ್ರಕಟಣೆಯಲ್ಲಿ ತಿಳಿಸಿದರು.

ಅವರು ಮುಂದುವರೆದು ಮಾತನಾಡಿ, ೬೭ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಾಡಿನ ಎಲ್ಲಾ ಸಾರ್ವಜನಿಕರಿಗೆ ಶುಭಾಶಯಗಳನ್ನು ಕೋರಿದರು. ನಂತರ ಧ್ವಜಾರೋಹಣದ ನಂತರ ತಹಶೀಲ್ದಾರರಾದ ಯು. ನಾಗರಾಜ್‌ರವರ ಉಪಸ್ಥಿತಿಯಲ್ಲಿ ಗಂಗಾವತಿ ನಗರದ ಜುಲೈನಗರದ ಕಂಪ್ಲಿ ರಸ್ತೆಯಲ್ಲಿರುವ ನವಜೀವನ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಬ್ರೆಡ್, ಬಿಸ್ಕೆಟ್, ಹಣ್ಣು-ಹಂಪಲುಗಳನ್ನು ವಿತರಿಸುವ ಮೂಲಕ ನವೆಂಬರ್-೧ ಕನ್ನಡ ರಾಜ್ಯೋತ್ಸವನ್ನು ಆಚರಿಸಿ, ಎಲ್ಲರೂ ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು, ಜಗತ್ತಿನಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದ್ದು, ತಂದೆ-ತಾಯಿಗಳ ಪ್ರೀತಿ. ಎಲ್ಲರೂ ತಮ್ಮ ತಮ್ಮ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಂಡರೆ, ವೃದ್ಧರು ಇಂತಹ ವೃದ್ಧಾಶ್ರಮಗಳಲ್ಲಿ ಕಾಲ ಕಳೆಯುವುದಕ್ಕಿಂತ ಕುಟುಂಬದ ಸದಸ್ಯರೊಂದಿಗೆ ಬದುಕಬಹುದು ಎಂದು ತಿಳಿಸಿದರು.
ನಂತರ ಡಿ.ವೈ.ಎಸ್.ಪಿ ಯಾದ ರುದ್ರೇಶ ಎಸ್. ಉಜ್ಜನಿಕೊಪ್ಪ ಹಾಗೂ ತಾಲೂಕ ವೈದ್ಯಾಧಿಕಾರಿಯಾದ ಡಾ|| ಈಶ್ವರ ಸವಡಿಯವರ ಉಪಸ್ಥಿತಿಯಲ್ಲಿ ಸರಕಾರಿ ಉಪವಿಭಾಗ ಆಸ್ಪತ್ರೆಯ ಒಳರೋಗಿಗಳಿಗೂ ಬ್ರೆಡ್, ಬಿಸ್ಕೆಟ್, ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ಬಳ್ಳಾರಿ ರಾಮಣ್ಣ ನಾಯಕ, ವಿರುಪಾಕ್ಷಿಗೌಡ ನಾಯಕ, ಚನ್ನಬಸವ ಜೇಕಿನ್ ಹಾಗೂ ಮಂಜುನಾಥ ಕಳ್ಳಿಮನಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Please follow and like us: