ಮೀಸಲಾತಿ ಹೆಚ್ಚಳ : ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಕೊಪ್ಪಳ : ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಅಶೋಕ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಸರಕಾರದ ನಿರ್ಣಯವನ್ನು ಸ್ವಾಗತಿಸಿ ಜಯಘೋಷ ಕೂಗಿದರು. ಬಹಳ ದಿನಗಳ ಹೋರಾಟಕ್ಕೆ ಸರಕಾರ ಒಪ್ಪಿಗೆ ಕೊಟ್ಟಿರುವುದು ಹೋರಾಟಕ್ಕೆ ಸಂದ ಜಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಗಣೇಶ ಹೊರತಟ್ನಾಳ, ಕನಕಪ್ಪ ಚೆಲವಾದಿ, ಸುರೇಶ ಡೊಣ್ಣಿ, ರುಕ್ಮಣ್ಣ ಶಾವಿ, ಶರಣಪ್ಪ, ಸುನೀಲ್ ಹೆಸರೂರ ,ಮಹಾಲಕ್ಷ್ಮಿ ಕಂದಾರಿ, ಮಹೇಶ ಕೊಪ್ಪಳ, ಗೀತಾ ಪಾಟೀಲ್, ಗೀತಾ, ವಾಣಿಶ್ರೀ ಮಠದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: