ಭರ್ಜರಿ ಮಳೆ : ಒತ್ತುವರಿಗೊಂಡ ಹಳ್ಳ-ಕೃತಕ ಪ್ರವಾಹ ಸೃಷ್ಟಿ

ಕೊಪ್ಪಳ ಅಧಿಕ ಮಳೆ: ಹಳ್ಳದ ಒತ್ತುವರಿ ರಸ್ತೆಗೆ ನುಗ್ಗಿದ ಬೃಹತ್ ಪ್ರಮಾಣದ ನೀರು : ಒತ್ತುವರಿಯಿಂದ ಕೃತಕ ಪ್ರವಾಹಕ್ಕೆ ಅವಕಾಶ

ಕೊಪ್ಪಳದ ಕಿನ್ನಾಳ ರಸ್ತೆಯ ಹಳ್ಳವನ್ನು ಅತಿಕ್ರಮಣ ಮಾಡಿ ಕೆಲವು ಖಾಸಗಿ ವ್ಯಕ್ತಿಗಳು ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಪರಿಣಾಮ , ಕಲ್ಯಾಣ ನಗರ,ಪ್ರಗತಿ ನಗರ ಮತ್ತಿತರ ಪ್ರದೇಶಗಳ ನಿವಾಸಿಗಳು ಪ್ರವಾಹ ಭೀತಿ ಎದುರಿಸುವಂತಾಗಿದೆ..

ತಲಾತಲಂತರದಿಂದ ಸುಮಾರು 40 ಕ್ಕೂ ಹೆಚ್ಚು ಅಡಿ ಅಗಲದಲ್ಲಿ ಹರಿಯುತ್ತಿದ್ದ ಹಳ್ಳವನ್ನು ಅತಿಕ್ರಮಿಸಿ,ಕೇವಲ 8 ಅಡಿ ಅಗಲದ ಕಾಲುವೆಯನ್ನು ಮಾತ್ರ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ.ನಿಸರ್ಗ ಸಹಜವಾಗಿ ಹರಿಯುತ್ತಿದ್ದ ನೀರಿನ ಹರಿವಿಗೆ ಇದೀಗ ಮಾರ್ಗವಿಲ್ಲದಂತಾಗಿ , ನೀರು ರಸ್ತೆಗೆ ನುಗ್ಗಿದೆ.ರಸ್ತೆಯೇ ಹಳ್ಳವಾಗಿ ಪರಿಣಮಿಸಿದೆ.ಇಂದು ಸುರಿದ ಮಳೆ ಸುತ್ತಲಿನ ಜನರಲ್ಲಿ ಆತಂಕ ಉಂಟು ಮಾಡಿದೆ.

ಮನುಷ್ಯನ ಅತಿಕ್ರಮಣ ದಾಹ ಕೃತಕ ಪ್ರವಾಹ ಸೃಷ್ಟಿಸುತ್ತಿದೆ.

ಕೊಪ್ಪಳ ಜಿಲ್ಲಾಡಳಿತ,ಕೊಪ್ಪಳ ನಗರಸಭೆ, ಭಾಗ್ಯನಗರ ಪಟ್ಟಣ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆ ಇತ್ತ ಕಣ್ಣು ತೆರೆದು ನೋಡಲಿ, ಸಮಸ್ಯೆ ಬೃಹತ್ ಆಪತ್ತಿಗೆ ದಾರಿ ಮಾಡಿಕೊಡುವ ಮುನ್ನ ನಿಯಮಾನುಸಾರ ಕ್ರಮ ಜರುಗಿಸಿ, ಒತ್ತುವರಿ ತೆರವುಗೊಳಿಸಲಿ…
ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ

Please follow and like us: