ಅ.9 ರಂದು ಹಜ್ರತ್ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆ-ಖತೀಬ್ ಬಾಷುಸಾಬ

ಕೊಪ್ಪಳ :

ಅ.9 ರಂದು ಕೊಪ್ಪಳ ನಗರದಲ್ಲಿ ಹಜ್ರತ್ ಮುಹಮ್ಮದ್ ಪೈಗಂಬರ ಜನ್ಮದಿನಾಚರಣೆಯನ್ನು (ಈದ್ ಮಿಲಾದ್) ವನ್ನು ಸಡಗರ, ಸಂಭ್ರಮದಿಂದ ಶ್ರದ್ದೆ ಭಕ್ತಿಯಿಂದ ಆಚರಿಸಲಾಗುವುದು ಎಂದು ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಭಾಷುಸಾಬ್ ಕತಿಬ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೇಶದ ಸ್ವಾತಂತ್ರ್ಯ ಕ್ಕಾಗಿ ಪ್ರಾಣಾರ್ಪಣೆ ಮಾಡಿದ ಶಹೀದ್ ಆಶ್ಫಾಕ್ ಉಲ್ಲಾಖಾನ್ ರ ಜಯಂತಿಯನ್ನು ಕೊಪ್ಪಳದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಂಘಟಕ ಸಯ್ಯದ್ ನಾಸೀರ್ ಹೇಳಿದರು. ಮಹಾರಾಷ್ಟ್ರ ದ ಪ್ರಮುಖ ಉಪನ್ಯಾಸಕರು ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಕ್ತದಾನ ದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ

ಹೀಗಾಗಿ ಪ್ರಸ್ತುತ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಮಹೆಬೂಬ ಮಚ್ಚಿ, ಅಶ್ಫಾಕ್ ಉಲ್ಲಾಖಾನ್ ಸಮಿತಿಯ ಅದ್ಯಕ್ಷ, ಮಹಮ್ಮದ್ ಅಜರುದ್ದೀನ್ , ಯುಸೂಫಿಯಾ ಮಸ್ಜೀದ್ ಕಮಿಟಿಯ ಯಾಜ್ದಾನಿ ಖಾದ್ರಿ, ಅಮೀರ ಸಿದ್ಧಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us: