ಕೊಪ್ಪಳ ತಾಲೂಕ ಆರ್ಯ ಈಡಿಗ ಸೇವಾ ಸಂಘದಿಂದ ಜಯಂತಿ ಆಚರಣೆ-ಈರಣ್ಣ ಹುಲಿಗಿ

ಇಂದು ನಾರಾಯಣ ಗುರುಗಳ ಜಯಂತ್ಯೋತ್ಸವ-

ಕೊಪ್ಪಳ :

ಜಗತ್ತಿನ ಮಾನವ ಕುಲಕ್ಕೆ ಸುಸಂದೇಶ ಸಾರಿದ ಪರಬ್ರಹ್ಮ ಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕ ಅಧ್ಯಕ್ಷ ಈರಣ್ಣ ಹುಲಿಗಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ನಗರದ ಅನೇಕ ಬೀದಿಗಳಲ್ಲಿ ಕುಂಭ, ಕಳಸಗದಿಗೆ ಅದ್ಧೂರಿ ಜಯಂತಿಯನ್ನು ಆಚರಿಸಲಾಗುವುದು.

ನಂತರ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮಕ್ಕೆ ವಿವಿಧ ಗಣ್ಯಮಾನ್ಯರಿಂದ ಚಾಲನೆ ನೀಡಲಾಗುವುದು. ಸೋಲೂರು ಮಹಾ ಸಂಸ್ಥಾನದ ಶ್ರೀ ವಿಖ್ಯಾತನಂದ ಮಹಾ ಗುರುಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು.ಮಾಜಿ ಲೋಕಸಭಾ ಸದಸ್ಯ ಎಚ್.ಜಿ.ರಾಮುಲು, ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್ ಶ್ರೀನಾಥ, ಸ್ಥಳಿಯ ಶಾಸಕ ರಾಘವೇಂದ್ರ ಹಿಟ್ನಾಳ ಶೋಭೆಯಾತ್ರೆಯನ್ನು ಉಧ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ಉದ್ಯಮಿ ಪ್ರದೀಪ್ ಹಾನಗಲ್ , ಈರಣ್ಣ ಹುಲಿಗಿ ವಹಿಸುವರು. ಸಚಿವ ಆನಂದಸಿಂಗ್ , ಹಾಲಪ್ಪ ಆಚಾರ್ ಜಂಟಿಯಾಗಿ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದಾರೆ.ಸಂಸದ ಸಂಗಣ್ಣ ಕರಡಿ, ಮಧು ಬಂಗಾರಪ್ಪ ಅವರು ನಾರಾಯಣ ಗುರುಗಳಿಗೆ ಪುಷ್ಪಾರ್ಚನೆ ಮಾಡುವರು.

ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿಮುಖಂಡ ವೆಂಕಟೇಶ ಗಂಗಾವತಿ, ರಾಘವೇಂದ್ರ ಹಾನಗಲ್ ಸೇರಿದಂತೆ ಇತರರು  ಹಾಜರಿದ್ದರು.

Please follow and like us: