ಈದ್ ಮಿಲಾದ್ ಪ್ರಯುಕ್ತ ಶಾಂತಿ ಸಭೆ

ಕೊಪ್ಪಳ : ಇದೇ ತಿಂಗಳ ೯ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೊಪ್ಪಳ ನಗರ ಠಾಣೆಯ ಆವರಣದಲ್ಲಿ ಶಾಂತಿ ಸಭೆ ನಡೆಯಿತು. ಶಾಂತಿಯುತವಾಗಿ, ಸೌಹಾರ್ಧತೆಯಿಂದ ಹಬ್ಬವನ್ನು ಆಚರಿಸಲು ಹಾಗೂ ಮೆರವಣಿಗೆ ನಡೆಸುವ ಕುರಿತಂತೆ ಯಶಸ್ವಿ ಸಭೆ ನಡೆಯಿತು‌ ಈ ಸಂದರ್ಭದಲ್ಲಿ ನಗರದ ಮುಖಂಡರಾದ ಖತೀಬ್ ಬಾಷು, ಮಾನ್ವಿ ಪಾಷಾ, ಕಾಟನ್ ಪಾಷಾ, ನಾಸೀರ್ ಪಾಡಾ, ರಾಜಶೇಖರ ಆಡೂರ, ಸುನಿಲ ಹೆಸರೂರ, ಸಲೀಂ ಅಳವಂಡಿ, ಜಿಲ್ಲಾ ವಕ್ಫ್ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ ಭಾಗವಹಿಸಿ ಮಾತನಾಡಿದರು.

ಡಿಎಸ್ಪಿ ಸುಭೆದಾರ್, ನಗರ ಠಾಣೆಯ ಸಿಪಿಐ ಹುಲ್ಲೂರ್, ಗ್ರಾಮೀಣ ಠಾಣೆಯ ಸಿಪಿಐ ವಿಶ್ವನಾಥ ಹಿರೇಗೌಡರ್, ಪಿಎಸೈ ಮುದ್ದುರಂಗಪ್ಪ, ಮಹಿಳಾ ಠಾಣೆಯ ಸಿಪಿಐ ಸೇರಿದಂತೆ ಇತರ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದರು‌

Please follow and like us: