ಸುರಭಿ ವೃದ್ದಾಶ್ರಮದಲ್ಲಿ ಮಹಾಂತಯ್ಯನಮಠ ಹುಟ್ಟು ಹಬ್ಬ ಆಚರಣೆ


ಕೊಪ್ಪಳ : ಕೊಪ್ಪಳ ವಿಧಾನಸಭೆ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ ಅವರು ನಗರದ ಸುರಭಿ ವೃದ್ಧಾಶ್ರಮದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು,ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಿದರು.
ವೃದ್ದಾಶ್ರಮದಲ್ಲಿ ಕೇಕ್ ಕತ್ತರಿಸಿ ನಂತರ ಕೊಪ್ಪಳ ವಿಧಾನಸಭೆ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ ಮಾತನಾಡಿ ಸುರಭಿ ವೃದ್ಧಾಶ್ರಮದಲ್ಲಿ ನಾನು ಹುಟ್ಟು ಹಬ್ಬ ಆಚರಿಸುತ್ತೀರುವುದು ಸಂತಸ ತಂದಿದೆ ಎಂದರು.
ನAತರ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು,ಅಭಿಮಾನಿಗಳು ಹುಟ್ಟುಹಬ್ಬದ ನಿಮಿತ್ಯ ಬಡಮಕ್ಕಳಿಗೆ ಹಣ್ಣುಗಳು, ನೋಟ್‌ಬುಕ್ ವಿತರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಮುಖಂಡರಾದ ಮೌನೇಶ ವಡ್ಡಟ್ಟಿ, ಜೆಡಿಎಸ್ ಪಕ್ಷದ ತಾಲೂಕಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಶಫೀಕ್,ಲಕ್ಷö್ಮಣ ಅಂಟಾಳಮರದ, ಶಕೀಲ್ ಮಂಗಳಾಪುರ, ಮಾರುತಿ ಕೊರಗಲ್ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು, ಸುರಭಿ ವೃದ್ಧಾಶ್ರಮದ ಗವಿಸಿದ್ದಪ್ಪ ತುಪ್ಪದ, ಬಸವರಾಜ್ ಉಪಸ್ಥಿತರಿದ್ದರು.

Please follow and like us: