ಸಾಲ ತೀರಿಸಲು ಅಮಾನವೀಯ ಬೆತ್ತಲೆ ಪೂಜೆ!

ಕೊಪ್ಪಳ : ಜಗತ್ತು ಎಷ್ಟು ಮುಂದವರೆದರೂ ಇಂತಹ ಅಮಾನವೀಯ ಆಚರಣೆಗಳು ಇನ್ನೂ ನಡೆಯುತ್ತಲೇ ಇವೆ. ಇದು ಇಡೀ ಸಮಾಜವೇ ತಲೆ ತಗ್ಗಿಸುವಂಥಹ ಘಟನೆ. 5G ಕಾಲದಲ್ಲೂ ಜನರ ಅಸಹಾಯಕತೆಯನ್ನು, ಮುಗ್ದತೆಯನ್ನು ದುಷ್ಟರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಉದಾಹರಣೆ ಈ ಪ್ರಕರಣ.

ಅಪ್ಪ ಮಾಡಿದ ಸಾಲ ತೀರು ಬೇಕು, ಕೈ ತುಂಬಾ ಹಣ ಬೇಕು ಅಂದ್ರೆ ಬೆತ್ತಲೆ ಪೂಜೆ ಮಾಡಬೇಕು ಎಂದು ಪುಸಲಾಯಿಸಿದ ದುಷ್ಟರು ಅಮಾಯಕ ಬಾಲಕನ ಬೆತ್ತಲೆ ಪೂಜೆ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ನಿವಾಸಿ ( 16) ನೊಂದ ಬಾಲಕ. ಈ
ಅಪ್ರಾಪ್ತ ಬಾಲಕನಿಂದ ಬೆತ್ತಲೆ ಪೂಜೆ ನಡೆದಿದೆ. ಬಡತನದ ಬೇಗೆಯಿಂದ ಬಳಲುತ್ತಿದ್ದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ಪೂಜೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಸಮಸ್ಯೆಗೆ ಪರಿಹಾರ ನೀಡುತ್ತೆವೆಂದು ಅಪ್ರಾಪ್ತ ಬಾಲಕನಿಗೆ ಬೆತ್ತಲೆ ಪೂಜೆ ಮಾಡಿ ನಂತರ ಪೂಜೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ವಿಕೃತ ಮೆರೆದಿದ್ದಾರೆ.ಶರಣಪ್ಪ,ವಿರುಪನಗೌಡ, ಶರಣಪ್ಪ ತಳವರ್ ವಿಕೃತ ಮೆರೆದವರು.

ಬಾಲಕನ ತಂದೆ ಮನೆಕಟ್ಟಲು ಸಾಲ ಮಾಡಿದ್ದರು. ಸಾಲ ತೀರಿಸಲು ಹುಬ್ಬಳ್ಳಿಗೆ ಕೂಲಿ‌ ಕೆಲಸಕ್ಕೆ ತೆರಳಿದ್ದ ಬಾಲಕನಿಗೆ ಶರಣಪ್ಪ, ವಿರುಪನಗೌಡ, ಶರಣಪ್ಪ ತಳವಾರ್ ಜೊತೆಯಾಗಿದ್ದಾರೆ. ನಿನ್ನ ಅಪ್ಪನ ಸಾಲ ತೀರ ಬೇಕು ಅಂದ್ರೆ ಬೆತ್ತಲೆ ಪೂಜೆ ಮಾಡಿದ್ರೆ ದುಡ್ಡು ಬರುತ್ತದೆ ಮತ್ತೆ ಸಾಲ ಕೂಡ ತೀರುತ್ತದೆ
ಬೆತ್ತಲೆ ಪೂಜೆ ಮಾಡಿದ್ರೆ ಬಡತನ ನಿವಾರಣೆ ಆಗುತ್ತೆ ಎಂದು ಶರಣಪ್ಪ ಮತ್ತು ತಂಡ ನಂಬಿಸಿದೆ‌. ಬಳಿಕ ರೂಮ್ ನಲ್ಲಿ ಬಾಲಕನ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಪೂಜೆ ಮಾಡುವ ನಾಟಕ ಮಾಡಿದ್ದಾರೆ.ಪೂಜೆಯ ವಿಡಿಯೋ ಮಾಡಿ ಫೇಸ್ ಬುಕ್, ವಾಟ್ಸ್ ಆಪ್ , ಯೂಟ್ಯೂಬ್ ಗಳಲ್ಲಿ ವಿಡಿಯೋ ವೈರಲ್ ಮಾಡಲಾಗಿದೆ. ಇದರಿಂದಾಗಿ ನೊಂದ ಬಾಲಕ ಮತ್ತು ಕುಟುಂಬದಿಂದ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

Please follow and like us: