ಜನಪ್ರಿಯ ವೈದ್ಯ ಡಾ|| ಮಹೇಂದ್ರ ವಿ. ಕಿಂದ್ರೆ ಅವರಿಗೆ ಸನ್ಮಾನ

ಕೊಪ್ಪಳ : ದಿ. ೦೨.ಅಕ್ಟೋಬರ್ ೨೦೨೨ ದಂದು ಕ್ರಿಸ್ತಜ್ಯೋತಿ ಇ.ಸಿ.ಐ. ಚರ್ಚ್ ಕೊಪ್ಪಳದಲ್ಲಿ ಜನಪ್ರಿಯ ವೈದ್ಯ ಡಾ|| ಮಹೇಂದ್ರ ವಿ. ಕಿಂದ್ರೆ ಎಂ.ಡಿ. ಮೆಡಿಸನ್ ಹಿರಿಯ ತಜ್ಞರು ಜಿಲ್ಲಾ ಆಸ್ಪತ್ರೆ, ಕೊಪ್ಪಳದಲ್ಲಿ ತಮ್ಮ ೨೫ ವರ್ಷಗಳ ಸಾರ್ಥಕ ಸರಕಾರಿ ಸೇವೆಯನ್ನು ಪೂರ್ಣಗೊಳಿಸಿ ದಿನಾಂಕ: ೩೦ ಸೆಪ್ಟಂಬರ್ ೨೦೨೨ ರಂದು ಸ್ವಯಂ ನಿವೃತ್ತಿ ಹೊಂದಿದ ಪ್ರಯುಕ್ತ ಕೊಪ್ಪಳದ ಇ.ಸಿ.ಐ. ಕ್ರಿಸ್ತಜ್ಯೋತಿ ಚರ್ಚ್ ನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚರ್ಚಿನ ಸಭಾ ಪಾಲಕರಾದ ರೆ|| ಜೆ. ರವಿಕುಮಾರ್ ಹಾಗೂ ಶ್ರೀ ದೇವೇಂದ್ರಪ್ಪ ವಿ. ಹುಲ್ಲೂರ್ ಕುಟುಂಬದವರಿಂದ, ಸಭಾ ಪಾಲನ ಸಮಿತಿ ಹಾಗೂ ಸಭೆಯವರಿಂದ ಸನ್ಮಾನಿಸಿ ಗೌರವಿಸಲಾಯಿತು. ಇವರ ಮುಂದಿನ ಜೀವನ ಸುಖಕರವಾಗಿರಲೆಂದು ಹಾಗೂ ವೈದ್ಯಕೀಯ ಸೇವೆ ಸುಖಕರವಾಗಲೆಂದು ಯೇಸುಕ್ರಿಸ್ತನ ನಾಮದಲ್ಲಿ ಪ್ರಾರ್ಥಿಸಿ ಶುಭ ಹಾರೈಸಿದರು..

 

Please follow and like us: