ಗಾಂಧೀಜಿಯವರ ವಿಚಾರ ಧಾರೆಗಳು ಇಂದಿಗೂ ಪ್ರಸ್ತುತ-ಜೀವನಸಾಬ ಬಿನ್ನಾಳ್

ಕೊಪ್ಪಳ – ನಗರದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರ ಜಯಂತಿಯನ್ನು ಇಂದು ೦೨-೧೦-೨೨ ರ ಬೆಳಿಗ್ಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಕುಷ್ಟಗಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಜೀವನಸಾಬ ಬಿನ್ನಾಳ್ ಅವರು ಮಾತನಾಡಿ ಗಾಂಧೀಜಿಯವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಶಿಕ್ಷಣವು ಕೇವಲ ಸೈದ್ಧಾಂತಿಕವಾಗಿರದೆ ಮಕ್ಕಳಲ್ಲಿ ಉತ್ತಮ ಕರಕುಶಲ ಕಲೆಯನ್ನು ಬೆಳೆಸುವಂತಿರಬೇಕು ಅಂದಾಗ ಮಾತ್ರ ಮಕ್ಕಳು ಸರ್ವೋತೋಮುಖ ಅಭಿವೃದ್ಧಿಯಾಗಲು ಸಹಾಯಕಾರಿ ಎಂದು ಹೇಳಿದರು. ಗಾಂಧಿಜೀಯವರು ಈ ನೆಲದ ದೀನ ದಲಿತರ ಉದ್ಧಾರಕ್ಕಾಗಿ, ಸುಸ್ಥಿರ ಬದುಕಿಗಾಗಿ, ಉಪ್ಪಿನ ಸತ್ಯಾಗ್ರಹದಂತಹ ಅನೇಕ ಹೋರಾಟಗಳನ್ನು ಮಾಡುವುದರ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ || ಎಸ್ ಬಿ ಕಂಬಾರರವರು ಮಾತನಾಡುತ್ತಾ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರರ ತ್ಯಾಗ ಬಲಿಧಾನವನ್ನು ನಾವು ಎಂದು ಮರೆಯಬಾರದು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಇಂತಹ ಮಹಾನ್ ಹೋರಾಟಗಾರರ ಆದರ್ಶಗಳನ್ನು ಮಾದರಿಯಾಗಿ ಮಾಡಿಕೊಂಡು ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರ ಜಯಂತಿಯ ಅಂಗವಾಗಿ ಸರ್ವ ಧರ್ಮ ಪ್ರಾರ್ಥನಾ ಹಾಗೂ ಮೀರಾ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ಯಮನೂರಪ್ಪ, ಮಹೇಶಮ್ಮ, ಶರೀಫಾ, ಮಂಜುನಾಥ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಗಂಗಾಧರ ಸೊಪ್ಪಿಮಠ. ಡಾ ಆನಂದರಾವ ದೇಸಾಯಿ, ಶೈಲಜಾ ಅರಳಲೇಮಠ, ಡಾ.ನೀಲಾಂಭಿಕೆ ಹುದ್ದಾರ್, ಶ್ರೀಲತಾ ದೇಸಾಯಿ, ಕಾಂಚನಗಂಗಾ, ಜಂಭಯ್ಯ, ಅನಿತಾ, ದೇವರಾಜ, ದೇವೇಂದ್ರ, ನಾಗರಾಜ, ಶಿವಕುಮಾರ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅಂದೇಶ ಒಳ್ಳಾಗಡ್ಡಿ ಮಾಡಿದರು. ಶ್ರೀದೇವಿ ಸ್ವಾಗತಿಸಿದರು. ಗೀತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಗಂಗನಗೌಡ ವಂದನಾರ್ಪಣೆ ಮಾಡಿದರು.

Please follow and like us: