ಗಾಂಧಿ ಜಯಂತಿ : ಜಿಲ್ಲಾಡಳಿತ ಭವನದಲ್ಲಿ ಪುಷ್ಪ ನಮನ ಸಲ್ಲಿಕೆ

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿçÃಯವರ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿಂದ (ಅ.02) ಬಾಪೂಜಿ ಹಾಗೂ ಶಾಸ್ತಿçÃಜಿ ಯವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಜಿಲ್ಲಾಡಳಿತ, ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿçÃಯವರ ಜಯಂತೋತ್ಸವವನ್ನು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಭಾನುವಾರದಂದು ಆಚರಿಸಲಾಯಿತು.
ಬಾಪೂಜಿ ಹಾಗೂ ಶಾಸ್ತಿçÃಜಿ ಯವರ ಭಾವಚಿತ್ರಿಕ್ಕೆ ಪುಷ್ಪಾರ್ಪಣೆ ಗೈದ ಶಾಸಕ ರಾಘವೇಂದ್ರ ಹಿಟ್ನಾಳ ಅವರು  ಮಾತನಾಡಿ, ಎಲ್ಲರಿಗೆ 154ನೇ ಗಾಂಧಿ ಜಯಂತಿ ಮತ್ತು 119ನೇ ಲಾಲ್ ಬಹದ್ದೂರ್ ಜಯಂತಿಯ ಶುಭಾಶಯಗಳು, ಭಾರತ ದೇಶ ಸ್ವಾತಂತ್ರö್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ, ಬಲಿದಾನ ಮಾಡಿದ್ದಾರೆ. ಅದರ ನೇತೃತ್ವ ವಹಿಸಿದ್ದ ಗಾಂಧೀಜಿ ಯವರು ಅಹಿಂಸಾ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಫಲವಾಗಿ ಭಾರತಕ್ಕೆ ಸ್ವಾತಂತ್ರö್ಯ ದೊರೆಯಿತು. ಜಗತ್ತಿನ ಬೇರೆ ದೇಶಗಳಿಗೂ ಗಾಂಧೀಜಿಯವರ ಜೀವನ ಮಾದರಿಯಾಗಿದೆ.  ಬಾಪೂಜಿ ಯವರ ಜೀವನ ಚರಿತ್ರೆ ನಮಗೆ ದಾರಿ ದೀಪವಾಗಿದ್ದು, ಅವರ ಆದರ್ಶ ಮತ್ತು ಜೀವನದ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಲಾಲ್ ಬಹದ್ದೂರ ಶಾಸ್ತಿçÃಯವರು ಹಸಿರು ಕ್ರಾಂತಿಯ ಮೂಲಕ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಗಾಂಧೀಜಿಯವರನ್ನು ನೆನಪಿಸಿಕೊಂಡರೆ ಮೊದಲು ನೆನಪು ಆಗುವುದು ಸತ್ಯಾಗ್ರಹ, ಹೋರಾಟ, ಅಹಿಂಸಾ ವಿಷಯಗಳು ಕಣ್ನುಂದೆ ಬರುತ್ತವೆ. ಯುನೆಡೆಡ್ ನೇಷನ್ಸ್ ಅಸೆಬ್ಲಿಯಲ್ಲಿ 2007 ಜೂನ್ 15 ರಿಂದ ಗಾಂಧೀಜಿ ಜನ್ಮವನ್ನು ಅಂತರಾಷ್ಟೀಯ ಅಹಿಂಸಾ ದಿನ ವೆಂದು ಘೋಷಣೆ ಮಾಡಿದೆ.  ದಕ್ಷಿಣ ಆಪ್ರಿಕಾದಲ್ಲಿ ಅವರು ವರ್ಣಬೇದ ನೀತಿಯ ವಿರುದ್ಧ ಹೋರಾಟ ಮಾಡಿದರು ಮತ್ತು ಬ್ಯಾರಿಸ್ಟರ್ ಪದವಿಯನ್ನು ಪಡೆದರು. ಆಗ ಭಾರತದಲ್ಲಿ ಒಬ್ಬ ಮಾಸ್ ಲೀಡರ್‌ಗಾಗಿ ನೋಡುತ್ತಿದ್ದರು. ಭಾರತಕ್ಕೆ ಬಂದ ಅವರು 1920ರಲ್ಲಿ ಅಸಹಕಾರ ಚಳುವಳಿ, ದಂಡಿ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಗಳ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಅದೇ ಸಂದರ್ಭದಲ್ಲಿ ಸುಖದೇವ್ ಮತ್ತು ಭಗತ್ ಸಿಂಗ್ ಹಾಗೂ ಸುಬಾಸ್‌ಚಂದ್ರ ಬೋಸ್‌ರು ಬ್ರಿಟೀಷರ ವಿರುದ್ಧ ಸ್ವಾತಂತ್ರö್ಯ ಪಡೆಯಲು ಹೋರಾಟ ಮಾಡುತ್ತಿದ್ದರು. ಬ್ರಿಟಿಷರ ವಿರುದ್ಧ ಆಯುಧದ ಮೂಲಕ ಹೋರಾಟ ಸಾಧ್ಯವಿಲ್ಲ. ಏಕೆಂದರೆ ನಮ್ಮಲ್ಲಿ ಆಯುಧಗಳ ಕೊರತೆ ಇದೆ. ಆದ್ದರಿಂದ ಗಾಂಧೀಜಿಯವರು ಅಹಿಂಸಾ ಮೂಲಕ ಹೋರಾಟ ಮಾಡಿದರು. ಇದರಿಂದ 1947ರಲ್ಲಿ ಭಾರತಕ್ಕೆ ಸ್ವಾತಂತ್ರö್ಯ ಸಿಕ್ಕಿತು.  ಗಾಂಧೀಜಿಯವರು ವೈಯಕ್ತಿಕ ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ತಮ್ಮ ಬದುಕಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಅವರ ಜೀವನ ಚರಿತ್ರೆಯನ್ನು ಇಂದಿನ ಮಕ್ಕಳು ಓದಬೇಕು ಮತ್ತು ಅವರ ಆದರ್ಶ ತತ್ವಗಳನ್ನು ಆಳವಡಿಸಿಕೊಳ್ಳಬೇಕು. ಹಾಗೆಯೇ ಶಾಸ್ತಿçÃಯವರು ಸಜ್ಜನಿಕ ಮತ್ತು  ಸರಳಜೀವಿಯಾಗಿದ್ದು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂದು ಹೇಳಬಹುದು. ಶಾಸ್ತಿçÃಯವರು ಭಾರತಕ್ಕೆ ಬಲಿಷ್ಠ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಹಸಿರು ಕ್ರಾಂತಿ ಮೂಲಕ ದೇಶಕ್ಕೆ “ಜೈ ಜವಾನ್ ಜೈ ಕಿಸಾನ್’’ ಘೋಷಣೆಯೊಂದಿಗೆ ದೇಶದ ರೈತರಿಗೆ ಮತ್ತು ಸೈನಿಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು.  ಶಾಸ್ತಿçÃಜಿಯವರು ಸರಳ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಇಂದಿನ ಮಕ್ಕಳು ಈ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಿರು ಚಿತ್ರ ಪ್ರದರ್ಶನ ಮತ್ತು ಭಜನೆ ಕಾರ್ಯಕ್ರಮ :
ಮಹಾತ್ಮ ಗಾಂಧೀಜಿ 154ನೇ ಜನ್ಮ ದಿನಾಚರಣೆ ಅಂಗವಾಗಿ ಬಾಪೂಜಿ ಜೀವನ ಚರಿತ್ರೆ ಕುರಿತ ಕಿರು ಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.  ಬಾಷು ಹಿರೇಮನಿ ಹಾಗೂ ತಂಡದಿAದ ಭಜನೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಕಾರ್ಯಕ್ರಮ ನಿರೂಪಿಸಿದರು.  ಈ ಸಂದರ್ಭದಲ್ಲಿ ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲಾ, ಜಂಟಿ ಕೃಷಿ ನಿರ್ದೇಶಕ ಸದಾಶಿವ, ಡಿಡಿಪಿಐ ಎಂ.ರೆಡ್ಡರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಾಗೂ ವಾರ್ತಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Please follow and like us: