ನಿವೃತ್ತ ಎಡಿಜಿಪಿ ಕೆ.ಎ.ಹಾಫೀಜ್ ನಿಧನ


ಗಂಗಾವತಿ : ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಬೀಗರಾದ ನಿವೃತ್ತ ಎಡಿಜಿಪಿ ಕೆ.ಎ.ಹಾಫೀಜ್ ನಿಧನರಾಗಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಹಾಪೀಜ್ ರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ  ವಾಸವಾಗಿದ್ದರು.  ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಳ್ಳಿ ತಾಲೂಕಿನವರು.  ಹಿರಿಯ ಮಗ ಆಶೀಫ್ ಹಫೀಜ್  ರೈಲ್ವೆ ಇಲಾಖೆಯಲ್ಲಿ ಸಿನಿಯರ್ ಡಿ ಪಿ ಓ  ಹಾಗೂ   ಕಿರಿಯ ಮಗ IPS  ಅಧಿಕಾರಿಯಾಗಿದ್ದಾರೆ.
ಮಗಳು KAS ಅಧಿಕಾರಿ ಅಳಿಯ ನಾರಾಯಣ ಹೃದಯಾಲಯದಲ್ಲಿ  ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರೂ ಮಕ್ಕಳು  ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಅಳಿಯಂದಿರು. ಮೃತರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಕೆ.ಎ.ಹಾಫೀಜರ ನಿಧನಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೇರಿದಂತೆ ಇತರ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಬಳ್ಳಾರಿಯ ಕೌಲಬಜಾರಿನಲ್ಲಿ ನಡೆಯಲಿದೆ‌

Please follow and like us: