ಕ್ಷೇತ್ರವನ್ನ ರಾಜ್ಯದಲ್ಲಿಯೆ ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನಿಟ್ಟುಕೊಂಡು ಪ್ರತಿಯೊಂದು ಗ್ರಾಮಕ್ಕೆ 5-10 ಕೋಟಿ ಅನುಧಾನವನ್ನ ನೀಡಿ ಅಭಿವೃದ್ದಿಗೆ ಶ್ರಮಿಸಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು ಹಿರೇಸಿಂದೋಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ದದೇಗಲ್,ಹಲಿಗೇರಿ, ಕೊಳೂರು,ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ,ಗುನ್ನಳ್ಳಿ, ಹೊರತಟ್ನಾಳ ಹಾಗೂ ಮಂಗಳಾಪುರ ಗ್ರಾಮಗಳಲ್ಲಿ 1.31 ಕೋಟಿ ಅನುಧಾನದ ವಿವಿಧ ಕಾಮಗಾರಿಗಳ ಭೂಮಿಪೂಜೆಯನ್ನ ನೆರವೇರಿಸಿ ಮಾತನಾಡಿದ ಶಾಸಕರು
ಪ್ರತಿಯೊಂದು ಗ್ರಾಮಕ್ಕೂ ಶಾಶ್ವತ ಹಾಗೂ ಶುದ್ದ ಕುಡಿಯುವ ನೀರನ್ನ ಒದಗಿಸುವ ಉದ್ದೇಶದಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದ 103 ಹಳ್ಳಿಗಳಿಗೆ 260 ಕೋಟಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನ ಮಂಜೂರು ಮಾಡಿಸಲಾಗಿದೆ ತುಂಗಭದ್ರ ಡ್ಯಾಂ ಹಿನ್ನೀರನ್ನ ಉಪಯೋಗಿಸಿಕೊಂಡು ಪ್ರತಿ ಗ್ರಾಮಕ್ಕೂ ನೀರನ್ನ ಒದಗಿಸುವ ಯೋಜನೆ ಇದಾಗಿದೆ ಎಂದರು. ಕೊಪ್ಪಳದಲ್ಲಿ 135 ಕೋಟಿಯ ಮೇಡಿಕಲ್ ಕಾಲೇಜನ್ನ ಸ್ಥಾಪಿಸಿದ್ದಲ್ಲದೇ ಅದರ ಪಕ್ಕದಲ್ಲಿಯೇ 112 ಕೋಟಿಯ 1000 ಬೆಡ್ಡಿನ 10 ಅಂತಸ್ಥಿನ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ ಈ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆದರೆ ಕೊಪ್ಪಳ ಜಿಲ್ಲೆ ಆರೋಗ್ಯ ಇಲಾಖೆಯಲ್ಲಿ ಇತಿಹಾಸದ ಕ್ರಾಂತಿಯನ್ನೆ ಸೃಷ್ಟಿಮಾಡಲಿದೆ ಎಂದರು.ಇದಲ್ಲದೆ 10 ಕೋಟಿ ಅನುಧಾನದಲ್ಲಿ ವಿಶೇಷವಾಗಿ 100 ಬೆಡ್ಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನ ಮಂಜೂರು ಮಾಡಿಸಿ ಅದರ ಉಧ್ಘಾಟನೆಯನ್ನ ನೆರವೇರಿಸಿಲಾಗಿದ್ದು ಅದು ಸೇವೆಯನ್ನ ಸಲ್ಲಿಸುತ್ತಿದೆ ಎಂದರು.ಕೇತ್ರದಲ್ಲಿ ನೀರಾವರಿ ಯೋಜನೆಗಳಿಗೂ ಹೆಚ್ಚು ಒತ್ತನ್ನು ನೀಡಲಾಗಿದೆ ಎಂದರು. 188 ಕೋಟಿಯ ಬಹದ್ದೂರ್ ಬಂಡಿ ನವಕಲ್ ಏತ ನೀರಾವರಿ ಯೋಜನೆ 14000 ಎಕರೆ ನೀರಾವರಿ,88 ಕೋಟಿಯ ಅಳವಂಡಿ -ಬೇಟಗೇರಿ ಏತ ನೀರಿವರಿ ಯೋಜನೆ ಅಲ್ಲದೆ ಗವಿಶ್ರೀಗಳ ಕನಸಿನ ಕೂಸು ಹಿರೇಹಳ್ಳಕ್ಕೆ 89 ಕೋಟಿಯಲ್ಲಿ 9 ಬ್ರೀಜ್ಡ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ,25ಕ್ಕೂ ಹೆಚ್ಚೂ ಚೆಕ್ ಡ್ಯಾಂ ಗಳನ್ನ ನಿರ್ಮಾಣ ಮಾಡಲಾಗಿದೆ ಎಂದರು.ಅಳವಂಡಿ ಭಾಗದಲ್ಲಿ 9 ಕೆರೆಗಳನ್ನ ತುಂಬಿಸುವ 22 ಕೋಟಿ ಯೋಜನೆಗೆ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಬಿ ನಾಗರಳ್ಳಿ,ಮಾಜಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದ್ರಿ,ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಪ್ರಸನ್ನ ಗಡಾದ,ಮುಖಂಡರಾದ ಹನಮರೆಡ್ಡಿ ಅಂಗನಕಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ,ಮುಖಂಡರಾದ ತೋಟಪ್ಪ ಕಾಮನೂರು, ಕೇಶವ ರೆಡ್ಡಿ,ನಿಂಗಪ್ಪ ಯತ್ನಟ್ಟಿ,ಪಂಪಣ್ಣ ಪೂಜಾರ,ಆನಂದ ಕಿನ್ನಾಳ,ನಿಂಗಜ್ಜ ಚೌದ್ರಿ ,ಹನಮಂತ ಹಳ್ಳಿಕೇರಿ,ದೇವಪ್ಪ ವದಗನಾಳ,ಸುರೇಶ ಹಳ್ಳಿಕೇರಿ,ಅಶೋಕ ಹಲಿಗೇರಿ ರವರು ಸೇರಿದಂತೆ ತಾಲೂಕು ಪಂಚಾಯತ EO ದುಂಡಪ್ಪ ತುರಾದಿ,BEO ನೇತ್ರಾದೇವಿ ರಡ್ಡಿ ಸೇರಿದಂತೆ ಇನ್ನೂ ಅನೇಕ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.