ಕೊಪ್ಪಳ ಏತ ನೀರಾವರಿ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವ ಹಾಲಪ್ಪ ಆಚಾರ್

ಯಲಬುರ್ಗಾ: :  ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಹುನಿರೀಕ್ಷಿತ, ಮಹತ್ವಾಕಾಂಕ್ಷಿ ಕೊಪ್ಪಳ ಏತ ನೀರಾವರಿ ಯೋಜನೆಯ ಬೌತಿಕ ಪ್ರಗತಿಯ ಕುರಿತು ಸ್ಥಾನಿಕವಾಗಿ ಪರಿಶೀಲನೆಯನ್ನು ಸಚಿವರಾದ  ಹಾಲಪ್ಪ ಆಚಾರ ಕೈಗೊಂಡರು. ಕೊಪ್ಪಳ ಜಿಲ್ಲೆಯ ಹಗೇದಾಳ, ಕಲಾಲಬಂಡಿ, ಶಾಖಾಪೂರ, ಗುನ್ನಾಳ ಭಾಗಗಳಲ್ಲಿ ಯೋಜನೆಯ ಪ್ರಗತಿಯನ್ನು ವೀಕ್ಷಣೆ ಮಾಡಿದರು. ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಿ ಕ್ಷೇತ್ರದ ಎಲ್ಲ ಕೆರೆಗಳಿಗೆ ಕೃಷ್ಣೆಯ ನೀರನ್ನು ಹರಿಸಲು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಲು  ಸಚಿವರಾದ  ಹಾಲಪ್ಪ ಆಚಾರ   ಅಗತ್ಯ ಸಲಹೆ ಸೂಚನೆಗಳನ್ನು ಇಲಾಖೆಯ ಅಧಿಕಾರಿಗಳಿಗೆ  ನೀಡಿದರು. ಈ ಸಂಧರ್ಭದಲ್ಲಿ ಕೃಷ್ಣ ಭಾಗ್ಯ ಜಲನಿಗಮ ನಿಯಮಿತ ಇಲಾಖೆಯ ಅಧಿಕಾರಿಗಳು ಸೇರಿದಂತೆ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.

Please follow and like us: