ಗ್ರಾಮಗಳ ಉದ್ಧಾರವೇ ದೇಶದ ಅಭಿವೃದ್ಧಿ; ಡಾ ಆರ್.ಮರೇಗೌಡ


ಕೊಪ್ಪಳ, ಸೆ.೨೬,-ದೇಶದ ಅಭಿವೃದ್ಧಿ ಗಾಮಗಳ ಮೇಲೆ ನಿಂತಿದೆ. ಅಂತಹ ಗ್ರಾಮಗಳನ್ನು ಉದ್ಧಾರ ಮಾಡುವಲ್ಲಿ ಯುವಕರ ಪಾತ್ರವೂ ಮುಖ್ಯವಾಗಿದೆ ಎಂದು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ.ಆರ್.ಮರೇಗೌಡರವರು ನುಡಿದರು. ಅವರು ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ನಡೆದ ೨೦೨೨-೨೩ನೇ ಸಾಲಿನ ವಾರ್ಷಿಕ ವಿಶೇಷ ಶಿರವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಅಭ್ಯಾಸ ಮಾಡುವ ಗೊಂಬೆಗಳಗಾದೇ ಗ್ರಾಮಗಳ ಕಡೆಗೆ ತಿರುಗಬೇಕಿದೆ, ಇಲ್ಲಿನ ಆಚರಣೆ-ಸಂಪ್ರಾದಾಯ, ಸಂಸ್ಕೃತಿಗಳನ್ನು ಅರಿಯಬೇಕಿದೆ. ವಿಶೇವಾಗಿ ಕೃಷಿಯ ಬಗ್ಗೆಯೂ ಅರಿತು ಅದರಲ್ಲಿ ತೊಡಗಬೇಕಿದೆ. ಅಂದಾಗ ಮಾತ್ರ ಒಬ್ಬ ವಿದ್ಯಾರ್ಥಿ ಪ್ರಬುದ್ಧನಾಗಲು ಸಾಧ್ಯವಿದೆ. ಆ ಗ್ರಾಮಗಳನ್ನು ಅರಿಯಲು ಇಂತಹ ಶಿಬಿರಗಳು ಅವಕಾಶ ಕಲ್ಪಿಸುತ್ತವೆ ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಕೊಪ್ಪಳ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೆಶಕರಾದ ಜಿ.ಎಂ.ಭೂಸನೂರುಮಠರವರು ವಿದ್ಯಾರ್ಥಿಗಳು ಸೇವಾ ಮನೋಭಾವ ಬೇಳಸಿಕೊಂಡು ದೇಶ ಸೇವೆ ಮಾಡಿ ಎಂದರು. ಮತ್ತೋರ್ವ ಅತಿಥಿ ಹಲಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಶೋಕ ರಾಂಪೂರರವರು ವಿದ್ಯಾರ್ಥಿಗಳ ಸೇವೆಗೆ ಬೇಕಾದ ಅಗತ್ಯ ಸೌಲಭ್ಯಗಲನ್ನು ಒದಗಿಸುವುದಾಗಿ ನುಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಹನುಮಪ್ಪ ತಳವಾರ ಎನ್.ಎಸ್.ಎಸ್ ಧ್ವಜಾರೋಹಣವನ್ನು ನೆರವೆರಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀಮತಿ ಕಮಲ ಅಳವಂಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ವೀರೇಶಕುಮಾರ ಎನ್.ಎಸ್ ವಹಿಸಿಕೊಂಡಿದ್ದರು. ಉಪನ್ಯಾಸಕ ಡಾ.ಬಾಲು ತಳವಾರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆಯ ಮೇಲೆ ಗ್ರಾಮ ಪಂಚಾಯತಿ ಸದಸ್‌ರುಗಳಾದ ಶುಭಾಸ್ ಹೋಗಾರ್, ಯಲ್ಲಪ್ಪ ಒಜಿನಹಳ್ಳಿ, ಕಂದಾಯ ನಿರೀಕ್ಷಕ ಮಂಜುನಾಥ ಮ್ಯಾಗಳಮನಿ, ಗ್ರಾಮದ ಮುಖಂಡರಾದ ಬಸನಗೌಡ ಪಾಟಿಲ, ಕುಭೇರಪ್ಪ ಗೊರವರ್, ಶರಣಪ್ಪ ಬಿನ್ನಾಳ್, ಸಿದ್ಧಪ್ಪ ಸಿಂದೋಗಿ, ಶರಣಯ್ಯ ಹಿರೇಮಠ, ದ್ಯಾಮಣ್ಣ ಅಬ್ಬಿಗೇರಿ, ರಾಮಣ್ಣ ಬಾರಕೇರ, ಭೀಮಣ್ಣ ಗುಡ್ಲಾನೂರು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಅಂಬುಜಾ ಪರಡೆಕರ್, ಸಹಶಿಕ್ಷಕ ಪರಶುರಾಮ, ಉಪನ್ಯಾಸಕರುಗಳಾದ ವೀರೇಶ ಕಾತರಕಿ, ಕೆ.ಎಸ್.ದಂಡಿನ್. ಸಂತೋಷ್ ಗೌಡ ಮತ್ತು ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಹಾಗು ಸಿಬ್ಬಂದಿಗಳಾದ ಗೋಣಿಬಸಪ್ಪ ಗುಡ್ಲಾನೂರು, ಮಲ್ಲಣ್ಣ ಕಾತರಕಿ, ಮಹೇಶ ಹಿರೇಮಠ ಉಪಸ್ಥಿತರಿದ್ದರು.
ಕು.ಸಂಗೀತ ಮತ್ತು ಸಂಗಡಿಗರೊಂದಿ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಕು.ಶಶಿಕುಮಾರ ಉಳ್ಳಾಗಡ್ಡಿ ಸ್ವಾಗತಿಸಿದರೆ, ಕೊನೆಗೆ ಕು.ಮುತ್ತಣ್ಣ ರಾಠೋಡ ವಂದಿಸಿದರು. ಈ ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಅಧಿಕಶಿಬಿರಾರ್ಥಿಗಳು ಭಾವಹಿಸಿದ್ದರು.

Please follow and like us: