ಹಾವಳಿ ಕಾದಂಬರಿ ಕುರಿತು ವಿಚಾರ ಸಂಕಿರಣ ಹಾಗೂ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆ

ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ, ಕೊಪ್ಪಳ ಇದರ ಆಶ್ರಯದಲ್ಲಿ ಮಲ್ಲಿಕಾರ್ಜುನ ಹಿರೇಮಠ ಅವರು ಬರೆದ ‘ಹಾವಳಿ’ ಕಾದಂಬರಿಯ ಬಗ್ಗೆ ವಿಚಾರ ಸಂಕಿರಣ, ದತ್ತಿ ಪ್ರಶಸ್ತಿ ಪ್ರದಾನ ಮತ್ತು ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ರವಿವಾರ ೨೫-೦೯-೨೦೨೨ ರಂದು ಮುಂಜಾನೆ ೧೦.೩೦ ಕ್ಕೆ ಕೊಪ್ಪಳದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಮೊದಲು ಸ್ವಾತಂತ್ರö್ಯ ಹೋರಾಟಗಾರ ಡಾ|| ಪಂಚಾಕ್ಷರಿ ಹಿರೇಮಠ ಅÀವರ ಕುರಿತು ಡಿ.ಎಮ್.ಬಡಿಗೇರ್ ಮಾತನಾಡಲಿದ್ದಾರೆ. ಕಾದಂಬರಿಯ ಬಗ್ಗೆ ಶ್ರೀಮತಿ ಸುಮತಿ ಹಿರೆಮಠ, ಶ್ರೀಮತಿ ಸಾವಿತ್ರಿ ಮುಜುಂದಾರ, ಈಶ್ವರ ಹತ್ತಿ, ಡಾ.ಭಾಗ್ಯಜ್ಯೋತಿ, ಶ್ರೀನಿವಾಸ ವಾಡಪ್ಪಿ ಮಾತನಾಡುವರು. ಶಂಭುಲಿAಗಪ್ಪ ಹಾರೋಗೇೆರಿ ಹಾಗೂ ಅರುಣಾ ನರೇಂದ್ರ ಅವರು ಸಂವಾದದಲ್ಲಿ ಪಾಲ್ಗೊಳ್ಳುವರು. ಕಾದಂಬರಿಕಾರ ಮಲ್ಲಿಕಾರ್ಜುನ ಹಿರೇಮಠ ಸಭೆಯಲ್ಲಿ ಹಾಜರಿರುತ್ತಾರೆ. ಶ್ರೀಮತಿ ಪುಷ್ಪಲತಾ ಏಳುಬಾವಿ ಅವರಿಗೆ ಶ್ರೀಮತಿ ಲಕ್ಷö್ಮಮ್ಮ ಪಂಪಣ್ಣ ಗೋನಾಳ ಪ್ರಶಸ್ತಿಯನ್ನು ಶ್ರೀನಿವಾಸ ವಾಡಪ್ಪಿ ಅವರು ಪ್ರದಾನ ಮಾಡುವರು. ಅಲ್ಲಮ ಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸುವರು. ಸಾಹಿತ್ಯಾಸಕ್ತರಿಗೆ ಕಾರ್ಯಕ್ರಮಕ್ಕೆ ಬರಲು ವಿನಂತಿಸಲಾಗಿದೆ.
ವಿಚಾರ ಸಂಕಿರಣ ಮುಗಿದ ಮೇಲೆ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆ ಅಲ್ಲಿಯೇ ನಡೆಯಲಿದೆ. ಸಂಘದ ಸರ್ವ ಸದಸ್ಯರು ಹಾಜರಿರಲು ಕೋರಲಾಗಿz

Please follow and like us: