ಆದರ್ಶ ಮೈಗೊಡಿಸಿಕೊಳ್ಳಲು ಸಲಹೆ

ಗಂಗಾವತಿ: ಕಡುಬಡತನದಲ್ಲಿ ಶಿಕ್ಷಣ ಪಡೆದ ಸರ್.ಎಂ. ವಿಶ್ವೇಶ್ವರಯ್ಯನವರು ಇಡೀ ಪ್ರಪಂಚ ಮೆಚ್ಚುವಂತ ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲ ಡಾ. ಕೆ.ಸಿ. ಕುಲಕರ್ಣಿ ತಿಳಿಸಿದರು.
ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿತ್ತಿನ ಆಶ್ರಯದಲ್ಲಿ ಗುರುವಾರ ಇಲ್ಲಿನ ಟಿಎಂಎಇ ಬಿಇಡಿ ಕಾಲೇಜಿನಲ್ಲಿ ನಡೆದ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು. ಸರ್.ಎಂ.ವಿ ಅವರು ದೂರದೃಷ್ಟಿಯುಳ್ಳ ಚಿಂತಕರಾಗಿದ್ದು ಮೈಸೂರು ಬ್ಯಾಂಕ್ ಹಾಗೂ ಕನ್ನಡ ಸಾಹಿತ್ಯ ಪರಿ?ತ್ತಿನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗುಣಗಾನ ಮಾಡಿದರು. ವಿಶ್ವೇಶ್ವರಯ್ಯನವರನ್ನು ಹೋಲಿಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಚಿಂತೆ ಇಲ್ಲ ಜೀವನದಲ್ಲಿ ಪ್ರಯತ್ನಶೀಲರಾಗಿ ಕೆಲಸ ಮಾಡಬೇಕು, ಮಹಾನೀಯರ ಜೀವನ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ ಮಾತನಾಡಿ ದೇಶದ ಮೇಧಾವಿಯಾಗಿದ್ದ ವಿಶ್ವೇಶ್ವರಯ್ಯನವರು ನಮ್ಮ ರಾಜ್ಯದವರು ಎಂಬುದು ಹೆಮ್ಮೆಯ ಸಂಗತಿಯಾಗಿದೆ, ರಾಜ್ಯಕ್ಕೆ ಕೀರ್ತಿ ತರುವಂತ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಕಸಾಪ ಕೇಂದ್ರ ಸಮಿತಿಯ ಸಂಘ-ಸಂಸ್ಥೆ ಪ್ರತಿನಿಧಿ ನಬೀಸಾಬ ಕು?ಗಿ ಮಾತನಾಡಿ ಸರಳ, ಪ್ರಾಮಾಣಿಕತೆ ಅವರ ಜೀವಾಳವಾಗಿತ್ತು, ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ತೇಜಸ್ವಿನಿ, ಶ್ರೀಕಾಂತ, ಸರಸ್ವತಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿ?ತ್ತಿನ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ, ಮೆಹಬೂಬಹುಸೇನ, ಶರಣಪ್ಪ ಕೋಟ್ಯಾಳ, ಕಳಕಪ್ಪ ಕುಂಬಾರ, ಕೋಶಾಧ್ಯಕ್ಷ ಚಂದ್ರಶೇಖರ ಅಕ್ಕಿ, ಗೌರವ ಕಾರ್ಯದರ್ಶಿ ರುದ್ರೇಶ ಮಡಿವಾಳ, ಚನ್ನಬಸವ ಜೇಕಿನ್, ಪ್ರಾಧ್ಯಾಪಕರಾದ ಡಾ. ಜಿ.ಎಂ. ವಿಜಯಲಕ್ಷ್ಮಿ, ಜಯರಾಮ ಮರಡಿತೋಟ, ಡಾ. ಶಿವಪ್ರಕಾಶ, ಡಾ. ಡಿ.ಎಂ. ಅರುಣಕುಮಾರ, ಶಿವರಾಜ ಪಾಟೀಲ ಇದ್ದರು.
ಚಂದ್ರಕಲಾ ನಾಯಕ ಹಾಗೂ ಅಶ್ವಿನಿ ಪ್ರಾರ್ಥಿಸಿದರು. ಪಲ್ಲವಿ ಸ್ವಾಗತಿಸಿದರು, ಹನುಮಂತ ನಿರೂಪಿಸಿದರು, ಮಹೇಶ ಕುಮಾರ ವಂದಿಸಿದರು.

Please follow and like us: