ಬಿ.ಸಿ ಪಾಟೀಲ್ ಅವರ ಸಂಶೋಧನಾ ಗ್ರಂಥ ಮರು ಮುದ್ರಣ ಕಾರ್ಯ ಆಗಬೇಕಿದೆ – ಶರಣಪ್ಪ ಬಾಚಲಾಪುರ

ನಮ್ಮಕೊಪ್ಪಳದ ಇತಿಹಾಸ ಸಂಶೋಧಕರಾಗಿದ್ದ  ಬಿ.ಸಿ. ಪಾಟೀಲ್ ಅವರು ತಮ್ಮ ಇಳಿವಯಸ್ಸಿನಲ್ಲಿ ಸಂಶೋಧನಾ ಕಾರ್ಯಕ್ಕೆ ತೊಡಗಿಸಿಕೊಂಡು ಅಭೂತಪೂರ್ವ  ಸಂಶೋಧನಾ ಗ್ರಂಥ ನೀಡಿದ್ದಾರೆ. ಅದರ ಮರು ಮುದ್ರಣ ಕಾರ್ಯ ಆಗಬೇಕಿದೆ ಎಂದು ಕೊಪ್ಪಳ ಮೀಡಿಯಾ ಕ್ಲಬ್ ನ ಅಧ್ಯಕ್ಷರಾದ ಶರಣಪ್ಪ ಬಾಚಲಾಪುರ ಅವರು ಅಭಿಮತ ವ್ಯಕ್ತಪಡಿಸಿದರು.
 ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದಿ.  ಬಿ.ಸಿ ಪಾಟೀಲ್ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇತಿಹಾಸದ ಕುರುಹುಗಳು ಹಾಗೂ ದಾಖಲೆಗಳ ರಕ್ಷಣಾ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
  ಇತಿಹಾಸಗಳು ಮನುಷ್ಯನ ಬದುಕಿನ ಸಂಸ್ಕಾರವನ್ನು ಪ್ರತಿಬಿಂಬಿಸುತ್ತವೆ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಇತಿಹಾಸ ಉಪನ್ಯಾಸಕರಾದ ಶ್ರೀಮತಿ ರತ್ನಮ್ಮ ಎಂ ಬಿ ಅವರು ವಿಶೇಷ ಉಪನ್ಯಾಸ ನೀಡಿ ಅಭಿಮತ ವ್ಯಕ್ತಪಡಿಸಿದರು. ಬಸವರಾಜ್ ಶಿರಗುಪ್ಪಿ ಶೆಟ್ಟರ್ ಅವರು ಸ್ವಾಗತಿಸಿದರೆ ಪ್ರಸ್ತಾವಿಕವಾಗಿ ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರಗೌಡ ಮಾತನಾಡಿದರು. ಆಶಯ ನುಡಿಯನ್ನು ರಮೇಶ್ ತುಪ್ಪದ ಮಾತನಾಡಿದರೆ ಬಿ.ಸಿ. ಪಾಟೀಲರ ಪರಿಚಯವನ್ನು ಶಿವಕುಮಾರ್ ಕುಕುನೂರ್ ಅವರು ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಶರಣಗೌಡ ಪಿ.ಪಾಟೀಲ್ ಅವರು ಮಾತನಾಡಿ ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡು ಕನ್ನಡ ಕಟ್ಟುವ ಕೆಲಸಕ್ಕೆ ಸಹಕರಿಸಬೇಕು ಎಂದು ಕೋರಿದರು.   ಈ ಸಮಾರಂಭದಲ್ಲಿ ಸಂತೋಷ್ ದೇಶಪಾಂಡೆ, ರಮೇಶ್ ಕುಲಕರ್ಣಿ ಚನ್ನಬಸಪ್ಪ ಕಡ್ಡಿಪುಡಿ ಶೇಖರ ಗೌಡ ಕುದುರೆಮೋತಿ ಸಿ.ಬಿ.ಪಾಟೀಲ ಕೊಪ್ಪಳ ತಾಲೂಕು ನಿಕಟಪೂರ್ವ ಅಧ್ಯಕ್ಷರಾದ ಗಿರೀಶ್ ಪಾನಘಂಟಿ, ಎಸ್ ಬಿ ಪಾಟೀಲ, ಅವಿನಾಶ್ ಪಾಟೀಲ, ರಾಜಶೇಖರ ಪಾಟೀಲ,  ಮಹೇಶ್ ಗೌಡ ಗೊಂಡಬಾಳ, ಗಂಗಾಧರ ಖಾನಾಪುರ ರಮೇಶ್ ಕನ್ನಡ ಉಪನ್ಯಾಸಕರು ಇದ್ದರು. ಮಲ್ಲಿಕಾರ್ಜುನ ಹ್ಯಾಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ “ಸ್ವಾತಂತ್ರ್ಯ ಅಮೃತ ಮಹೋತ್ಸವ ನನ್ನ ಕನಸು ನನ್ನ ನೆಲವು” ವಿಷಯ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಥಮ ಸ್ಥಾನ ಬಸವಂತಮ್ಮ ಪಿ ಆಡಿನ್ ದ್ವಿತೀಯ ಸ್ಥಾನ ಶಾಂಭವಿ ಎಂ ಬಡಿಗೇರ ತೃತೀಯ ಸ್ಥಾನ ಬಸವರಾಜ ಮೇಟಿ ಪಡೆದುಕೊಂಡಿದ್ದರು.
Please follow and like us: