ಭಾಗ್ಯನಗರ : ದಿ ಶ್ರೀಮತಿ ಕನಿಗೊಳ್ಳ ವೆಂಕಟನಾಗ ಮಾಧವಿ ಇವರ ಸ್ಮರಣಾರ್ಥ ಭಾಗ್ಯನಗರದ ಖ್ಯಾತ ಉದ್ಯಮಿ ಶ್ರೀನಿವಾಸ ಗುಪ್ತಾ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸೇವೆಯನ್ನು ಉದ್ಘಾಟಿಸಲಾಯಿತು. ಭಾಗ್ಯನಗರದ ನಿರಾಶ್ರಿತರ ಓಣಿಯ ಪಾಂಡುರಂಗ ಗುಡಿಯ ಹತ್ತಿರ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ.


ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮಠದ ಶ್ರೀಗಳು, ಪಟ್ಟಣ ಪಂಚಾಯತ್ ಸದಸ್ಯರು, ತುಕಾರಾಮಪ್ಪ ಗಡಾದ, ಪರಶುರಾಮ್, ರಾಘವೇಂದ್ರ ಅರಕಲ್, ಶಂಕರ, ಮೋಹನ್ ಮೇಘರಾಜ್, ನಿರಂಜನ್, ಉಮೇಶ್, ಗವಿಸಿದ್ದಪ್ಪ, ಸೇರಿದಂತೆ ಪಟ್ಟಣದ ವಿವಿಧ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಶ್ರೀನಿವಾಸ ಗುಪ್ತಾರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
Please follow and like us: