ನಿಮ್ಮ ಸೇವೆಯನ್ನು, ಕರ್ತವ್ಯವನ್ನು ಪ್ರೀತಿಸಿ- ಪಿ.ವಿ.ಆನಂದರೆಡ್ಡಿ

Koppal. ತರಬೇತಿಯ ಬಗ್ಗೆ ಎಷ್ಟು ಹೊಗಳಿದರೂ ಸಾಲದು . ಎಲ್ಲ ರೀತಿಯ ತರಬೇತಿಯನ್ನು ನೀಡಲಾಗಿದ್ದು ಜ್ಞಾನವನ್ನು ಭೋಧಿಸಿದ್ದಾರೆ. ಒಳ್ಳೆಯ ತರಬೇತಿ ನೀಡಿ ಜವಾಬ್ದಾರಿಯುತ ಸರಕಾರಿ ನೌಕರರನ್ನಾಗಿಸಿದ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದು ಬೆಳಗಾವಿ ಉತ್ತರವಲಯದ ಕಾರಾಗೃಹದಳ ಉಪಮಹಾ ನಿರಿಕ್ಷಕ ಪಿವಿ.ಆನಂದ ರಡ್ಡಿ ಹೇಳಿದರು.

ಕೊಪ್ಪಳದ ತಾತ್ಕಾಲಿಕ ಪೊಲೀಸ ತರಬೇತಿ ಕೇಂದ್ರದ ೯ನೇ ತಂಡದ ಕಾರಾಗೃಹ ಮತ್ತು ಸುಧಾರಾಣಾ ಸೇವೆ ಇಲಾಖೆಯ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಥಸಂಚಲನದ ನಂತರ ಬಹುಮಾನತ ವಿತರಿಸಿ ಮಾತನಾಡಿದ ಅವರು

ಸರಕಾರಿ ಸೇವೆಯಲ್ಲಿ ಸೇರುವುದು ಇತ್ತೀಚಿನ ದಿನಗಳಲ್ಲಿ ಕಷ್ಟಕರ. ಸಾಕಷ್ಟು ಜನರಿಗೆ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ. ಒಂದು ಕಾಲದಲ್ಲಿ ಹೈಸ್ಕೂಲ್ ಓದದೇ ಇದ್ರೂ ಕೆಲಸ ಸಿಗ್ತಾ ಇತ್ತು. ಆದರೆ ಈಗ ಸ್ನಾತಕೋತ್ತರ ಶಿಕ್ಷಣ ಪಡೆದರೂ ಕೆಲಸ ಪಡೆಯುವುದು ಕಷ್ಟಕರ. ಹೊಟ್ಟೆಪಾಡಿಗಾಗಿ ಕೆಲಸ ಅಲ್ಲ ಸೇವೆಯಲ್ಲಿ ಸಾರ್ಥಕತೆ ಪಡೆಯಬೇಕು. ತರಬೇತಿಯ ಸದ್ಭಳಕೆ ಮಾಡಿಕೊಳ್ಳಬೇಕು. ಬಹಳಷ್ಟು ಉಪನ್ಯಾಸಕರು ವಿವಿಧ ಕ್ಷೇತ್ರಗಳಿಂದ ಬಂದು ಜ್ಞಾನ ನೀಡಿದ್ದಾರೆ. ಮೊದಲಿಗೂ ಈಗಿನ ಪರಿಸ್ಥಿತಿ ಗೂ ಕಾರಾಗೃಹದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇನ್ನಷ್ಟು ಸುಧಾರಣೆಗಳಾಗಬೇಕು. ಒಬ್ಬರಿಂದ ಇಲಾಖೆ ನಡೆಸಲಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಪಾತ್ರ ಅರಿತುಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಬೇಕು ಆವಾಗ ಬದಲಾವಣೆ ಕಾಣಬಹುದು.‌ಬೇರೆಯವರ‌ಜೊತೆ ಹೋಲಿಕೆ ಮಾಡಿಕೊಳ್ಳಬೇಡಿ ನಿಮ್ಮ ಸೇವೆಯನ್ನು, ಕರ್ತವ್ಯವನ್ನು ಪ್ರೀತಿಸಿ ಎಂದು ಕರೆ ನೀಡಿದರು.

ಯಂತ್ರಗಳಿಂದ ಮಾಡುವ ಕೆಲಸವನ್ನು ಮಾನವರಿಂದ ಮಾಡಬಹುದು ಇದನ್ನು ಮಾಡಿ ತೋರಿಸಬೇಕು ಎಂದು ಹೇಳಿದರು.

ನಾಲ್ವರು ಮಹಿಳೆಯರು ಸೇರಿದಂತೆ
೪೩ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ನಿರ್ಗಮನ ಪಥಸಂಚಲನ ನಡೆಯಿತು. ಮಹದೇವಪ್ರಸಾದ ಐಅರ್ ಬಿ ಕಮಾಂಡೆಂಟ್ , ಡಿಎಸ್ಪಿ ಸುಬೇದಾರ್, ಜಿಲ್ಲಾ ಕಾರಾಗೃಹ ಅದೀಕ್ಷಕ ವಿಜಯ ಚವ್ಹಾಣ ಸೇರಿದಂತೆ ಅಧಿಕಾರಿಗಳು,‌ ಪಾಲಕರು ಉಪಸ್ಥಿತರಿದ್ದರು.    ಎಸ್ ಪಿ.ಅರುಣಾಗ್ಷು ಗಿರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ರಾಹುಲ್ ಆಲರೌಂಡರ್ ಪ್ರಶಸ್ತಿಯನ್ನು ಪಡೆದರು.

ಕಾರ್ಯಕ್ರಮಕ್ಕೆ ಸ್ವಾಗತವನ್ನು ಡಿಅರ್ ಡಿಎಸ್ಪಿ ಶಶಿಧರ ಹಿರೇಮಠ ನೆರವೇರಿಸಿದರು.

Please follow and like us: