ಹುಲಿಹೈದರ್ ಹತ್ಯೆಗಳಲ್ಲಿ ಅಮಾಯಕರ ಬಂಧನ ಖಂಡಿಸಿ , ಬಿಡುಗಡೆಗೆ ಒತ್ತಾಯಿಸಿ ಜಾಥಾ

ಗಂಗಾವತಿ: ಹುಲಿಹೈದರ್ ಗಲಭೆಯಲ್ಲಿ ಸಿಪಿಐಎಂಎಲ್ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಕಾ|| ಸಣ್ಣ ಹನುಮಂತಪ್ಪ ಇವರನ್ನು ಬಂಧಿಸಿರುವುದನ್ನು ಖಂಡಿಸಿ  ಗಂಗಾವತಿಯ ಕಾರ್ಮಿಕರು, ಸಿಪಿಐಎಂಎಲ್ ಸದಸ್ಯರು ರ್‍ಯಾಲಿಯನ್ನು ನಡೆಸಿದ್ದಾರೆ. ಈ ರ್‍ಯಾಲಿಯಲ್ಲಿ ಸುಮಾರು ೧೦೦೦ ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು.

ಹುಲಿಹೈದರ್‌ನಲ್ಲಿ ನಡೆದ ಕೊಲೆ, ಹಿಂಸಾಚಾರವನ್ನು ಸಮಗ್ರ ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿ

ತಸ್ಥರನ್ನು ಬಂಧಿಸಬೇಕು.  ಸಣ್ಣಹನುಮಂತ ಮತ್ತು ಇತರರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆದು ಕೂಡಲೇ ಬಿಡುಗಡೆಗೊಳಿಸಬೇಕು. ದಿನಾಂಕ ೧೧.೦೮.೨೦೨೨ರ ಹಿಂಸಾಚಾರದಲ್ಲಿ ತಮ್ಮ ಪ್ರಾಣ ಕಳೆದುಕೊಂಡ  ಪಾಷಾವಲಿ ಮತ್ತು   ಯಂಕಪ್ಪ ತಳವಾರ ಅವರ ಕುಟುಂಬಗಳಿಗೆ ೫೦ ಲಕ್ಷ ರೂ. ಹಾಗೂ ಗಾಯಾಳು ಧರ್ಮರಾಜ್ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡಬೇಕು.
ತೀವ್ರತರವಾಗಿ ಗಾಯಗೊಂಡ   ಧರ್ಮಜ್ಜ ಅವರ ಸಂಪೂರ್ಣ ಚಿಕಿತ್ಸೆಗಾಗಿ ಸಹಾಯಧನವನ್ನು ಜಿಲ್ಲಾಡಳಿತ ನೀಡಬೇಕು.
ತ್ವರಿತವಾಗಿ ಜಿಲ್ಲಾಡಳಿತದ ಅಧಿಕಾರಿಗಳು ಶಾಂತಿಸಭೆಯನ್ನು ಸೇರಿಸಿ, ಹುಲಿಹೈದರ್ ಹಳ್ಳಿಯಲ್ಲಿ ಸಹಜ ಪರಿಸ್ಥಿತಿಯನ್ನು ನಿರ್ಮಿಸಬೇಕು.
ದುಷ್ಕೃತ್ಯವನ್ನು ತಡೆಯುವಲ್ಲಿ ನಿಷ್ಕಾಳಜಿವಹಿಸಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಿ, ವಿಚಾರಣೆಗೆ ಒಳಪಡಿಸಬೇಕು ಈ  ಒತ್ತಾಯಗಳೊಂದಿಗೆ ನಗರದ ಸಿ.ಬಿ.ಎಸ್ ವೃತ್ತದಿಂದ ಜಾಥಾ ಪ್ರಾರಂಭಿಸಿ, ಗಾಂಧಿಸರ್ಕಲ್, ಮಹಾವೀರ ಸರ್ಕಲ್ ಮುಖಾಂತರ ಶ್ರೀಕೃಷ್ಣದೇವರಾಯ ವೃತ್ತ ತಲುಪಿ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಎಐಸಿಸಿಟಿಯು ಕಾರ್ಯದರ್ಶಿ ಕಾ|| ಪಿ.ಪಿ ಅಪ್ಪಣ್ಣ, ಪ್ರಗತಿಪರ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ, ರಾಜ್ಯ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಸಂಘದ ಕಾರ್ಯದರ್ಶಿ ಕೇಶು ನಾಯಕ, ಪೌರಕಾರ್ಮಿಕರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ಬಾಬರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್, ಗಂಗಾವತಿ ತಾಲೂಕ ಅಧ್ಯಕ್ಷ ಚಾಂದ್ ಪಾಷಾ, ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾ ಸಂಚಾಲಕ ಭಾಷಾ, ಜೆಡಿಎಸ್ ಕಾರ್ಯಕರ್ತ ಹಾಗೂ ದಾರುಣ್‌ಕರ ತಮ್‌ಜುಮ್ ಕಮಿಟಿ ಸದಸ್ಯ ಅಲ್ತಾಫ್, ಮಹಿಳಾ ಕಾರ್ಮಿಕರಾದ ಮಾಯಮ್ಮ, ಪಾರ್ವತೆಮ್ಮ, ಮೂಕಮ್ಮ, ನಿಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.

Please follow and like us: